News

ಫೆ.7ಕ್ಕೆ ಪಾಪ್‌ ಕಾರ್ನ್‌ ಮಂಕಿ ಟೈಗರ್‌ ರಿಲೀಸ್

Published

on

ಡಾಲಿ ಧನಂಜಯ ಮತ್ತು ಸೂರಿ ಕಾಂಬಿನೇಶನ್‌ನ ಎರಡನೇ ಚಿತ್ರ ಪಾಪ್‌ ಕಾರ್ನ್‌ ಮಂಕಿ ಟೈಗರ್‌ ಸಿನಿಮಾ ಇದೇ ಫೆ 7ಕ್ಕೆ ರಿಲೀಸ್‌ ಆಗಲಿದೆ.

 

ಈಗಾಗಲೇ ಬಿಡುಗಡೆಯಾಗಿರುವ ಮಾದೇವ ಹಾಡು ಮತ್ತು ಟೀಸರ್‌ ಈ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಹುಟ್ಟುವಂತೆ ಮಾಡಿದೆ. ಟಗರು ಚಿತ್ರದ ಡಾಲಿ ಪಾತ್ರವನ್ನು ಅದ್ಭುತವಾಗಿ ಸೃಷ್ಟಿ ಮಾಡಿದ್ದ ಸೂರಿ ಈ ಬಾರಿ ಧನಂಜಯ ಅವರನ್ನು ಮಂಕಿ ಸೀನನಾಗಿಸಿದ್ದಾರೆ. ಈ ಮಂಕಿ ಸೀನ ಮತ್ತು ಸೂರಿಯ ಅಬ್ಬರವನ್ನು ತೆರೆ ಮೇಲೆ ನೋಡಲು ಜನ ಕಾತರದಿಂದ ಕಾಯುತ್ತಿದ್ದಾರೆ.

 

ಎಸಿಪಿ ಉಮೇಶ್‌ ಅವರ ಪುತ್ರ ಸಪ್ತಮಿ ಉಮೇಶ್‌ ಈ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ನಿವೇದಿತಾ, ಅಮೃತಾ ಅಯ್ಯಾಂಗರ್‌ ಈ ಸಿನಿಮಾದ ನಾಯಕಿಯರು. ಒಬ್ಬ ವ್ಯಕ್ತಿಯ ಆರು ವರ್ಷದ ಜರ್ನಿಯನ್ನು ಸೂರಿ ಇಲ್ಲಿ ಹೇಳಲು ಹೊರಟಿದ್ದು, ಅದಕ್ಕೆ ಆಯ್ಕೆ ಮಾಡಿಕೊಂಡಿರುವುದು ಒಬ್ಬ ರೌಡಿಯ ಜೀವನವನ್ನು. ಸುಧೀರ್‌ ಕೆ ಎಂ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಚರಣ್‌ರಾಜ್‌ ಸಂಗೀತ ನೀಡಿದ್ದಾರೆ. 

Spread the love
Click to comment

Copyright © 2019 PopcornKannada.com