Cinema News
2,500 ಚಿತ್ರಮಂದಿರಗಳಲ್ಲಿ ‘ಪೈಲ್ವಾನ್’ ಬಿಡುಗಡೆ??

ಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಸಿನಿಮಾದ ಮೇಲೆ ಅಭಿಮಾನಿಗಳು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಸಿನಿಮಾದ ಟೀಸರ್ ಮತ್ತು ಫಸ್ಟ್ ಲುಕ್‌ಗಳು ಧೂಳೆಬ್ಬಿಸುತ್ತಿವೆ. ಈಗ ಸಿನಿಮಾ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆ, ಮತ್ತೊಂದು ಸುದ್ದಿ ಜೋರಾಗಿ ಹರಿದಾಡುತ್ತಿದೆ. ಅದು ಪೈಲ್ವಾನ್ ಇಡೀ ಭಾರತದದ್ಯಾಂತ 2500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ ಎಂಬುದು.
‘ಪೈಲ್ವಾನ್’ ತೆಲುಗು ಭಾಷೆಯ ವಿತರಣೆಯನ್ನು ಈಗ ಚಿತ್ರದ ನಿರ್ಮಾಪಕರಾದ “ವಾರಾಹಿ” ಕಂಪನಿ ಖರೀದಿಸಿದ್ದಾರೆ. ಅವ್ರು ಈ ಹಿಂದೆ ಕೆಜಿಎಫ್ ಚಿತ್ರದ ತೆಲುಗು ಅವತರಿಣಿಕೆಯನ್ನು ಆಂಧ್ರ ಮತ್ತು ತೆಲಂಗಣದಲ್ಲಿ ಬಿಡುಗಡೆ ಮಾಡಿದ್ದರು.

ಹೌದು ಪೈಲ್ವಾನ್ ಸಿನಿಮಾ ಒಟ್ಟು ಎಂಟು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಅವೆಲ್ಲ ಭಾಷೆಗಳು ಸೇರಿ ಅಷ್ಟು ಚಿತ್ರಮಂದಿರಗಳಾಗುತ್ತದಂತೆ. ಸುದೀಪ್ ಆಕಾಂಕ್ಷ ಸಿಂಗ್, ಸುನೀಲ್ ಶೆಟ್ಟಿ ಸೇರಿದಂತೆ ಭಾರಿ ತಾರಾಗಣವಿರುವ ಈ ಚಿತ್ರವನ್ನು ಕೃಷ್ಣ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ, ಹೊಸ ಪೋಸ್ಟರ್‌ಗೆ ಅಭಿಮಾನಿಗಳು ಮತ್ತು ಭಾರತೀಯ ಚಿತ್ರರಂಗ ಮೆಚ್ಚುಗೆ ವ್ಯಕ್ತಪಡಿಸಿತ್ತು.
ಸದ್ಯದ ಮಾಹಿತಿ ಪ್ರಕಾರ ಪೈಲ್ವಾನ್ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಒಟ್ಟಿನಲ್ಲಿ ಕನ್ನಡ ಸಿನಿಮಾವೊಂದು ಇಷ್ಟೋಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು ಅನ್ನಿಸುತ್ತದೆ.
