Connect with us

Cinema News

ನಿರಂಜನ್–ರಚನಾ ಕ್ಯೂಟ್ ಕೆಮಿಸ್ಟ್ರಿ; ‘ಸ್ಪಾರ್ಕ್’ನ ರೊಮ್ಯಾಂಟಿಕ್ ಹಾಡು ಬಿಡುಗಡೆ

Published

on

ನಿರಂಜನ್ ಸುಧೀಂದ್ರ ಅಭಿನಯದ ಬಹುನಿರೀಕ್ಷಿತ ‘ಸ್ಪಾರ್ಕ್’ ಚಿತ್ರದ ‘ಮಧುರ ಮುಗುಳು ನಗೆ..’ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿದೆ. ಹಾಡಿನ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡ ಹಾಗೂ ಸ್ಯಾಂಡಲ್‌ವುಡ್‌ನ ಹಲವು ಗಣ್ಯರು ಭಾಗವಹಿಸಿ ಶುಭ ಹಾರೈಸಿದರು. ಹಾಡಿನಲ್ಲಿ ನಿರಂಜನ್ ಸುಧೀಂದ್ರ ಅವರ ಮುದ್ದಾದ ಲುಕ್ ಮತ್ತು ರಚನಾ ಇಂದರ್ ಜೊತೆಗಿನ ಕ್ಯೂಟ್ ಕೆಮಿಸ್ಟ್ರಿ ಗಮನ ಸೆಳೆಯುತ್ತಿದೆ. ಸ್ಟಾರ್ ಕುಟುಂಬದ ಕುಡಿಯಾಗಿರುವ ನಿರಂಜನ್ ಅವರಿಗೆ ಬೆಂಬಲವಾಗಿ ಚಿಕ್ಕಮ್ಮ ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಕುಟುಂಬದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಿರಂಜನ್ ಅವರ ಅಜ್ಜಿ ಹಾಗೂ ಉಪೇಂದ್ರ ಅವರ ತಾಯಿ ಅನಸೂಯಮ್ಮ ಹಾಡನ್ನು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.

ಹಾಡಿನ ಪ್ರದರ್ಶನದ ಬಳಿಕ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, ತಾವು ಮದುವೆಯಾಗಿ ಮೊದಲ ಬಾರಿ ಉಪೇಂದ್ರ ಅವರ ಮನೆಗೆ ಕಾಲಿಟ್ಟಾಗ ತಮ್ಮನ್ನು ಸ್ವಾಗತಿಸಿದ್ದ ಪುಟ್ಟ ಮಗು ನಿರಂಜನ್ ಎಂದು ನೆನಪಿಸಿಕೊಂಡರು. ‘ಮಧುರ ಮುಗುಳು ನಗೆ’ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದ್ದು, ಈ ಹಾಡಿಗೆ ತಾವು ಮತ್ತು ಉಪೇಂದ್ರ ರೀಲ್ಸ್ ಮಾಡುವುದಾಗಿ ಹೇಳಿದರು. ನಿರಂಜನ್ ಜೊತೆ ತಾವು ಸಿನಿಮಾದಲ್ಲೂ ಕೆಲಸ ಮಾಡಿದ್ದು, ತಮ್ಮ ಮಗನೂ ಅವರಿಂದ ಕಲಿಯುವಂತೆ ಹೇಳುತ್ತೇನೆ ಎಂದರು. ನಿರ್ದೇಶಕ ಡಿ. ಮಹಾಂತೇಶ್ ಹಂದ್ರಾಳ್ ಸಾರಥ್ಯದ ‘ಸ್ಪಾರ್ಕ್’ ಸೆಪ್ಟೆಂಬರ್ 25ರಂದು ತೆರೆಗೆ ಬರಲಿದೆ. ನಿರ್ದೇಶಕ ದಯಾಳ್ ಪದ್ಮನಾಭನ್ ಹಾಗೂ ಡಾರ್ಲಿಂಗ್ ಕೃಷ್ಣ ಕಾರ್ಯಕ್ರಮಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ದಯಾಳ್ ಅವರು ಮಹಾಂತೇಶ್ ಅವರೊಂದಿಗಿನ ತಮ್ಮ ಹಳೆಯ ಒಡನಾಟವನ್ನು ನೆನಪಿಸಿಕೊಂಡು, ಚಿತ್ರದಲ್ಲಿ ನಂದಿ ಹಿಲ್ಸ್ ಅನ್ನು ವಿಭಿನ್ನವಾಗಿ ತೋರಿಸಿರುವುದನ್ನು ಮೆಚ್ಚಿದರು. ನಿರಂಜನ್ ಕನ್ನಡದ ಹೊಸ ತಲೆಮಾರಿನ ಭರವಸೆಯ ನಾಯಕ ಎಂದು ಪ್ರಶಂಸಿಸಿದರು.

ಡಾರ್ಲಿಂಗ್ ಕೃಷ್ಣ ಮಾತನಾಡಿ, ನಿರಂಜನ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಡಾನ್ಸ್ ಹಾಗೂ ಸ್ಟಂಟ್‌ಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದು, ಅಭಿನಯದ ಜತೆಗೆ ಡಾನ್ಸ್ ಮತ್ತು ಫೈಟ್‌ಗೂ ಉತ್ತಮ ತಯಾರಿ ಮಾಡಿಕೊಂಡಿದ್ದಾರೆ ಎಂದರು. ಅವರನ್ನು ಕನ್ನಡದ ಹೃತಿಕ್ ರೋಷನ್ ಎಂದು ಕರೆದ ಕೃಷ್ಣ, ರಚನಾ ಇಂದರ್ ಜೊತೆ ಹಾಡಿನಲ್ಲಿ ಉತ್ತಮ ಕೆಮಿಸ್ಟ್ರಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಾಯಕ ನಿರಂಜನ್ ಸುಧೀಂದ್ರ, ಚಿತ್ರದಲ್ಲಿ ಮಾಧ್ಯಮ ಪ್ರತಿನಿಧಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರತಂಡ ತಮ್ಮ ಮೇಲಿಟ್ಟ ನಂಬಿಕೆಗೆ ತಕ್ಕಂತೆ ಸಂಬಳವನ್ನೂ ಲೆಕ್ಕಿಸದೆ ಶ್ರಮಿಸಿದ್ದಾಗಿ ಹೇಳಿದರು. ಸಚಿನ್ ಬಸ್ರೂರು ಸಂಗೀತ ನೀಡಿರುವ ‘ಮಧುರ ಮುಗುಳು ನಗೆ’ ಹಾಡನ್ನು ಅವರೇ ಹಾಡಿದ್ದು, ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದ್ದಾರೆ. ರಚನಾ ಇಂದರ್ ತಮ್ಮ ಮೊದಲ ಶಾಟ್ ಇದೇ ಹಾಡಿಗಾಗಿ ಚಿತ್ರೀಕರಿಸಲಾಗಿತ್ತು ಎಂದು ತಿಳಿಸಿ, ನಿರ್ದೇಶಕರ ಸಲಹೆಯಂತೆ ವಿಭಿನ್ನ ಲುಕ್‌ಗಾಗಿ ಗುಂಗುರು ಕೂದಲು ಮಾಡಿಕೊಂಡಿರುವುದಾಗಿ ಹೇಳಿದರು. ಚಿತ್ರದಲ್ಲಿ ತಾವು ಎಂಬಿಬಿಎಸ್ ವಿದ್ಯಾರ್ಥಿನಿಯಾಗಿ ನಟಿಸಿರುವುದಾಗಿ ತಿಳಿಸಿದರು.

‘ಸ್ಪಾರ್ಕ್’ನಲ್ಲಿ ಲವ್ಲಿಸ್ಟಾರ್ ಪ್ರೇಮ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪರವಾಗಿ ಮಾತನಾಡಿದ ಪತ್ನಿ ಜ್ಯೋತಿ ಪ್ರೇಮ್, ಆ್ಯಕ್ಷನ್ ಪಾತ್ರದಲ್ಲಿ ನಟಿಸುವುದು ಪ್ರೇಮ್ ಅವರ ಬಹುದಿನಗಳ ಆಸೆಯಾಗಿದ್ದು, ಈ ಸಿನಿಮಾದ ಮೂಲಕ ಅದು ಈಡೇರಿದೆ ಎಂದರು. ಪಾತ್ರಕ್ಕಾಗಿ ಅವರು ಸಾಕಷ್ಟು ತಯಾರಿ ನಡೆಸಿದ್ದು, ಸಾಮಾನ್ಯವಾಗಿ ಸಿಗರೇಟ್ ಸೇದದ ಪ್ರೇಮ್ ಪಾತ್ರದ ಅಗತ್ಯಕ್ಕಾಗಿ ಧೂಮಪಾನ ಮಾಡಬೇಕಾಯಿತು ಎಂದು ಹೇಳಿದರು. ನಟ ಧರ್ಮಣ್ಣ ಕಡೂರು, ನಿರ್ದೇಶಕರ ಯೋಜನೆ ಮತ್ತು ಕೆಲಸದ ಶೈಲಿಯನ್ನು ಮೆಚ್ಚಿದರು. ನಿರ್ದೇಶಕ ಮಹಾಂತೇಶ್, ಹಾಡಿನ ಗುಣಮಟ್ಟದಂತೆಯೇ ಇಡೀ ಚಿತ್ರವೂ ಉತ್ತಮವಾಗಿ ಮೂಡಿಬಂದಿದೆ ಎಂದರು. ನಿರ್ಮಾಪಕರು ನೀಡಿದ ಸಂಪೂರ್ಣ ಬೆಂಬಲಕ್ಕೆ ಧನ್ಯವಾದ ತಿಳಿಸಿದ ಅವರು, ದಯಾಳ್ ಪದ್ಮನಾಭನ್ ಅವರಿಂದ ಸಿನಿಮಾ ನಿರ್ಮಾಣದಲ್ಲಿ ಹಣವನ್ನು ಪರಿಣಾಮಕಾರಿಯಾಗಿ ಬಳಸುವುದನ್ನು ಹಾಗೂ ಡಾರ್ಲಿಂಗ್ ಕೃಷ್ಣ ಅವರಿಂದ ಭಾವನೆಗಳನ್ನು ತೆರೆ ಮೇಲೆ ಕಟ್ಟಿಕೊಡುವುದನ್ನು ಕಲಿತಿರುವುದಾಗಿ ಹೇಳಿದರು. ನಿರ್ಮಾಪಕಿ ಡಾ.ಗರಿಮಾ, ನಿರ್ದೇಶಕ ಹಾಗೂ ನಾಯಕನ ಆಯ್ಕೆಗೆ ಸಾಕಷ್ಟು ಚರ್ಚೆ ನಡೆಸಿದ ಬಳಿಕ ನಿರಂಜನ್ ಅವರನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದರು. ನಿರ್ಮಾಣ ತಂಡದ ಅವಿನಾಶ್ ವಸಿಷ್ಠ ಈಗಾಗಲೇ ಸಿನಿಮಾ ವೀಕ್ಷಿಸಿದ್ದು, ಆರಂಭದಿಂದ ಕೊನೆಯವರೆಗೂ ಗಮನ ಬೇರೆಡೆ ಹೋಗದಷ್ಟು ಸಿನಿಮಾ ಹಿಡಿದಿಟ್ಟುಕೊಳ್ಳುತ್ತದೆ ಎಂದರು. ‘ಸ್ಪಾರ್ಕ್’ ಸೆಪ್ಟೆಂಬರ್ 25ರಂದು ಚಿತ್ರಮಂದಿರಗಳಿಗೆ ಬರಲಿದೆ.

Spread the love

Continue Reading