Connect with us

Cinema News

ಚಿತ್ರಮಂದಿರಗಳಲ್ಲಿ “ಮಾಯಾನಗರಿ” ದರ್ಶನ.. ರಾಜ್ಯಾದ್ಯಂತ ಈ ವಾರ ಮಾಯಾನಗರಿ ಬಿಡುಗಡೆ

Published

on

ಈಗಾಗಲೇ ಟ್ರೇಲರ್ ಹಾಗೂ ಹಾಡುಗಳ ಮೂಲಕ ಸಾಕಷ್ಟು ಗಮನ ಸೆಳೆದಿರುವ ಮಾಯಾನಗರಿ ಸಿನಿಮಾ ಈ ವಾರ (ಡಿ. 15 ರಂದು) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶಂಕರ್ ಆರಾಧ್ಯ ನಿರ್ದೇಶನದ, ಅನೀಶ್ ತೇಜೇಶ್ವರ್ ನಟನೆಯ ಈ ಸಿನಿಮಾ ಸುಮಾರು 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಅನೀಶ್ ಜೋಡಿಯಾಗಿ ಶ್ರಾವ್ಯ ರಾವ್ ಹಾಗೂ ತೇಜು ನಟಿಸಿದ್ದಾರೆ.

ಶೂಟಿಂಗ್ ವೇಳೆ ಸಾಕಷ್ಟು ಪರಿಶ್ರಮ ಹಾಕಿರುವ ಚಿತ್ರತಂಡ, ಹಲವಾರು ರಿಸ್ಕಿ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದೆ. ಈ ಕುರಿತು ಮಾತನಾಡುವ ನಿರ್ದೇಶಕ ಶಂಕರ್ ಆರಾಧ್ಯ, “ಈ ಚಿತ್ರದಲ್ಲಿ ಅನೀಶ್ ಅವರನ್ನು ಬೇರೆ ಬೇರೆ ಶೇಡ್ ಗಳಲ್ಲಿ ತೋರಿಸಿದ್ದೇನೆ. ಕಥೆಗೆ ಅನುಗುಣವಾಗಿ ಸಾಕಷ್ಟು ಲೊಕೇಶನ್ ಗಳಲ್ಲಿ ಶೂಟ್ ಮಾಡಲಾಗಿದೆ. ಟೆಕ್ನಿಕಲ್ ಆಗಿಯೂ ಸಿನಿಮಾ ತುಂಬಾ ಅದ್ಧೂರಿಯಾಗಿದೆ. ಕ್ಲೈಮ್ಯಾಕ್ಸ್ ಸನ್ನಿವೇಶ ನಿಜಕ್ಕೂ ಸವಾಲಿನ ಕೆಲಸವಾಗಿತ್ತು” ಎನ್ನುತ್ತಾರೆ.

ಮಾತು ಮುಂದುವರಿಸುವ ಶಂಕರ್, “ಜೋಗ್ ಫಾಲ್ಸ್ ನಲ್ಲಿ ಶೂಟಿಂಗ್ ನಡೆಸಲು ಸುಮಾರು ಎರಡು ವಾರಗಳ ಕಾಲ ತಯಾರಿ ನಡೆಸಿದ್ದೇವೆ. ಈವರೆಗೂ ಯಾರು ಆ ರೀತಿ ಜೋಗ್ ತೋರಿಸಿಲ್ಲ. ಅದನ್ನು ಸಿನಿಮಾ ನೋಡಿಯೇ ಫೀಲ್ ಮಾಡಬೇಕು. ಅದೇ ರೀತಿ ಶೃಂಗೇರಿ, ಚಿಕ್ಕಮಗಳೂರು, ಹೊನ್ನಾವರ, ಮಾಗಡಿ, ತುಮಕೂರು ಮತ್ತು ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ.

ತಾಂತ್ರಿಕವಾಗಿಯೂ ಸಿನಿಮಾದಲ್ಲಿ ವಿಶೇಷವಿದೆ. ಮಾಸ್ ಮಾದ, ವಿಕ್ರಮ್ ಮೋರ್ ಫೈಟ್ ಕಂಪೋಸ್ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತಕ್ಕೆ ಯೋಗರಾಜ್ ಭಟ್, ಹರೀಶ್ ಶೃಂಗ, ಶಿವನಂಜೇ ಗೌಡ, ಸುದರ್ಶನ್ ಸಾಹಿತ್ಯ ಬರೆದಿದ್ದಾರೆ. ದುಮಾರಿ ಕ್ಯಾಮೆರಾ ತರಿಸಿ ಶೂಟ್ ಮಾಡಿದ್ದೇವೆ” ಎನ್ನುವ ಶಂಕರ್, ತಾರಾಗಣ ಹಾಗೂ ಇನ್ನುಳಿ ವಿಷಯದ ಬಗ್ಗೆಯೂ ವಿವರಿಸಿದರು… 

“ಮಾಯಾನಗರಿ ಸಿನಿಮಾ ಸ್ಯಾಂಡಲ್ ವುಡ್ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿದೆ.
ಮದನ್ – ಹರಿಣಿ ಹಾಗೂ ಮುರಳಿ ನೃತ್ಯ ನಿರ್ದೇಶನ, ವಿಜಯ್ ಎಂ ಕುಮಾರ್ ಸಂಕಲನ, ಶ್ರೀನಿವಾಸ್ ಕ್ಯಾಮೆರಾ ಕೈಚಳಕ ಈ ಚಿತ್ರಕ್ಕಿದೆ.
ಶರತ್ ಲೋಹಿತಾಶ್ವ, ಅವಿನಾಶ್, ಸುಚೇಂದ್ರ ಪ್ರಸಾದ್, ಎಡಕಲ್ಲು ಗುಡ್ಡದ ಚಂದ್ರಶೇಖರ್, ಚಿಕ್ಕಣ್ಣ, ಭರತ್ ಸಾಗರ್, ಗಿರಿ ದಿನೇಶ್ ಚಿತ್ರದ ತಾರಾಬಳಗದಲ್ಲಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *