Connect with us

Cinema News

ಟ್ರೇಲರ್ ನಲ್ಲಿ ಜೂನಿ…ಫೆಬ್ರವರಿ 9ಕ್ಕೆ ತೆರೆಗೆ ಬರ್ತಿದೆ ಪೃಥ್ವಿ ಅಂಬಾರ್ ಸಿನಿಮಾ..

Published

on

ಪೃಥ್ವಿ ಅಂಬಾರ್ ಒಂದರ ಹಿಂದೊಂದು ವಿಶಿಷ್ಠ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಹೊಸ ಸಿನಿಮಾವೊಂದು ಈಗ ಬಿಡುಗಡೆಗೆ ಸಿದ್ಧವಾಗಿದೆ. ಆ ಸಿನಿಮಾವೇ ‘ಜೂನಿ’. ಟೈಟಲ್ನಿಂದಲೇ ಗಮನ ಸೆಳೆಯುತ್ತಿರುವ ಈ ಚಿತ್ರದ ಟ್ರೇಲರ್, ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ನಿನ್ನೆ ಬಿಡುಗಡೆ ಮಾಡಲಾಗಿದೆ. ಈ ವೇಳೆ ಚಿತ್ರತಂಡ ಮಾಧ್ಯಮದರೊಂದಿಗೆ ಮಾಹಿತಿ ಹಂಚಿಕೊಂಡಿದೆ.

ನಾಯಕ ಪೃಥ್ವಿ ಅಂಬಾರ್ ಮಾತನಾಡಿ, ವೈಭವ್ ಎಷ್ಟು ಕ್ಲಾರಿಟಿಯಾಗಿ ಮಾತನಾಡಿದರೋ, ಅಷ್ಟೇ ಕ್ಲಾರಿಟಿಯಾಗಿ ಸಿನಿಮಾ ಮಾಡಿದ್ದಾರೆ. ವಯಸ್ಸಿನಲ್ಲಿ ನನಗಿಂತ ಚಿಕ್ಕವರು. ಬುದ್ಧಿವಂತಿಕೆ,ಅನುಭದಲ್ಲಿ ತುಂಬಾ ದೊಡ್ಡವರು. ಈ ಸಿನಿಮಾದಲ್ಲಿ ಕ್ರಿಕೆಟ್ ಟೀಂ ಎಂದುಕೊಂಡರೆ ಅತಿ ಹೆಚ್ಚು ಸ್ಕ್ರೋರ್ ಮಾಡುವವರು ವೈಭವ್. ಅವರಷ್ಟೇ ಸ್ಕ್ರೋರ್ ಮಾಡುವವರು ರಿಷಿಕಾ. ಎರಡೂವರೆ ತಿಂಗಳ ಬಹಳಷ್ಟು ರಿಹರ್ಸಲ್ ಮಾಡಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಬೇಕು ಎಂದು ತುಂಬಾ ಡೆಡಿಕೇಟೆಡ್ ಆಗಿ ಚಿತ್ರ ಮಾಡಿದ್ದಾರೆ. ನನ್ನದು 50% ಪರಿಶ್ರಮಅಷ್ಟೇ ಇರುವುದು. ಎಲ್ಲರದ್ದೂ 100ರಷ್ಟು ಇದೆ ಎಂದು ತಿಳಿಸಿದರು.

ನಾಯಕಿ ರಿಷಿಕಾ ಮಾತನಾಡಿ, ನಾವು 2022ರಲ್ಲಿ ಈ ಚಿತ್ರದ ಶೂಟಿಂಗ್ ಶುರು ಮಾಡಿದೆವು. ಆ ಟೈಮ್ ನಲ್ಲಿ ನನ್ನದು ಎರಡನೇ ಪ್ರಾಜೆಕ್ಟ್. ನನಗೆ ಈ ರೀತಿ ಕ್ಯಾರೆಕ್ಟರ್ ಸಿಕ್ಕಿರುವುದು ಖುಷಿ ಇದೆ. ತುಂಬಾ ರಿಹರ್ಸಲ್ ಮಾಡಿದ್ದೇವೆ. ಇದು ನನ್ನ ಒಬ್ಬಳ ಪ್ರಯತ್ನವಲ್ಲ. ಇಡೀ ತಂಡದ ಪ್ರಯತ್ನ. ಈ ಚಿತ್ರದಲ್ಲಿ ಒಂದೊಳ್ಳೆ ಮೆಸೇಜ್ ಇದೆ. ಸ್ಪ್ಲಿಟ್ ಪರ್ಸನಾಲಿಟಿ ಸುತ್ತಾ ಸಾಗುವ ಚಿತ್ರ ಇದಾಗಿದೆ ಎಂದರು.

ನಿರ್ದೇಶಕ ವೈಭವ್ ಮಹಾದೇವ್, ಜೂನಿ ಕಥೆ ಮೇಲೆ ತುಂಬಾ ನಂಬಿಕೆ ಇದೆ. ಆ ಕಥೆ ಮೇಲೆ ಇರುವ ನಂಬಿಕೆಯಿಂದ ನಾವಿಲ್ಲಿ ಕುಳಿತುಕೊಂಡಿದ್ದೇವೆ. ನಾನೊಂದು ಕಥೆಯನ್ನು ಜನರಿಗೆ ಹೇಳುತ್ತಿದ್ದೇನೆ, ಅದು ಒಬ್ಬನಿಗೆ ಆಗಲಿ, ಅದು ಸಿನಿಮಾವಾಗಲಿ. ಅದನ್ನು ಕೋಟ್ಯಾಂತರ ಜನ ಕನ್ನಡಿಗರ ಮುಂದೆ ಇಡಬೇಕು ಎಂದರೆ ಅದು ಲಕ್, ಹಾರ್ಡ್ ವರ್ಕ್ ಎಲ್ಲವೂ ಬೇಕು. ಈ ಚಿತ್ರ ಮಾಡಿರುವುದಕ್ಕೆ ನನಗೂ ತೃಪ್ತಿ ಇದೆ. ಸ್ಪ್ಲಿಟ್ ಪರ್ಸನಾಲಿಟಿ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಜನಕ್ಕೆ ಈ ಕಂಡಿಷನ್ ಬಗ್ಗೆ ಅರ್ಥ ಮಾಡಿಸಬೇಕು ಎನ್ನೋದು ನನ್ನ ಪ್ರಯತ್ನ ಎಂದರು.

ಪೃಥ್ವಿ ಅಂಬಾರ್ ನಟಿಸುತ್ತಿರುವ ‘ಜೂನಿ’ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರೋದು ವೈಭವ್ ಮಹಾದೇವ್. ಇವರು ಈಗಾಗಲೇ ‘ಜನ್ನಿ’ ಅನ್ನೋ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದರು. ಈಗ ‘ಜೂನಿ’ ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆಯನ್ನು ಇಡುತ್ತಿದ್ದಾರೆ. ಪ್ರಾಗ್ ಫಿಲ್ಮ್ ಸ್ಕೂಲ್ನಲ್ಲಿ ನಿರ್ದೇಶನ ಬಗ್ಗೆ ತರಬೇತಿಯನ್ನು ಪಡೆದಿದ್ದಾರೆ. ಈಗ ‘ಜೂನಿ’ ಸಿನಿಮಾಗೆ ಕಥೆ- ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಇಂತಹ ವಿಭಿನ್ನ ಟೈಟಲ್ ಇಟ್ಟು ಮಾಡುತ್ತಿರುವ ಸಿನಿಮಾಗೆ ರಿಷಿಕಾ ನಾಯಕ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದ್ಹಾಗೆ ‘ಜೂನಿ’ಯ ಒಂದೆಳೆ ಕಥೆ ಏನಪ್ಪ ಅಂದ್ರೆ, ” ಪ್ರೀತಿ ಯಾರ ಮೇಲೆ ಹುಟ್ಟುತ್ತೋ.. ಅವರ ಮೇಲೆ ಪ್ರೀತಿ ಆಗುತ್ತಾ?” ಇಂತಹದ್ದೊಂದು ಪ್ರಶ್ನೆಯನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ. ತ್ರಿಶೂಲ ಕ್ರಿಯೇಷನ್ ಬ್ಯಾನರ್ನಿಂದ ಮೋಹನ್ ಕುಮಾರ್ ಎಂಬುವವರು ಹಣ ಹಾಕಿದ್ದಾರೆ. ಶ್ರೇಯಸ್ ವೈ ಎಸ್ ಎಂಬುವವರು ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

‘ಜೂನಿ’ ಸಿನಿಮಾವನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಈ ಸಿನಿಮಾವನ್ನು ಚಿತ್ರತಂಡ ಫೆಬ್ರವರಿ 9ಕ್ಕೆ ಬಿಡುಗಡೆ ಮಾಡುವುಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ‘ಲವ್ ಮಾಕ್ಟೇಲ್ 2’ಗೆ ಆಕ್ಷನ್ ಕಟ್ ಹೇಳುತ್ತಿರುವ ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಶಾಂಕ್ ನಾರಾಯಣ ಎಡಿಟಿಂಗ್ ಮಾಡಿದ್ರೆ, ಅಜಿನ್ ಬಿ, ಜಿತಿನ್ ದಾಸ್ ಕ್ಯಾಮರಾ ವರ್ಕ್ ಇದೆ. ಹಾಗೇ ನವೀನ್ ಈ ಸಿನಿಮಾಗೆ ಆರ್ಟ್ ಡೈರೆಕ್ಷನ್ ಮಾಡಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *