Cinema News
ಮಾತಿನ ಮನೆಯಲ್ಲಿ ಕಾರ್ತಿ….‘ಜಪಾನ್’ ಸಿನಿಮಾ ಡಬ್ಬಿಂಗ್ ಶುರು

ತಮಿಳು ನಟ ಕಾರ್ತಿ ನಟಿಸುತ್ತಿರುವ 25ನೇ ಸಿನಿಮಾ ಜಪಾನ್..ಇತ್ತೀಚೆಗೆ ರಿಲೀಸ್ ಆಗಿದ್ದ ಕ್ಯಾರೆಕ್ಟರ್ ಟೀಸರ್ ಭಾರೀ ಸದ್ದು ಮಾಡಿತ್ತು,. ಇದೀಗ ಮನೆ ಮನೆಯಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಅಂದರೆ ಜಪಾನ್ ಸಿನಿಮಾದ ಡಬ್ಬಿಂಗ್ ಶುರುವಾಗಿದೆ. ಸಣ್ಣದಾಗಿರುವ ಝಲಕ್ ಮೂಲಕ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ,

ಜೋಕರ್ ಸಿನಿಮಾ ಮೂಲಕ ನ್ಯಾಷನಲ್ ಅವಾರ್ಡ್ ಗೆ ಮುತ್ತಿಟ್ಟಿದ್ದ ನಿರ್ದೇಶಕ ರಾಜು ಮುರುಗನ್, ನಿರ್ಮಾಪಕರಾದ ಎಸ್ ಆರ್ ಪ್ರಕಾಶ್ ಬಾಬು ಹಾಗೂ ಎಸ್ ಆರ್ ಪ್ರಭು ಜಪಾನ್ ಸಿನಿಮಾ ಮೂಲಕ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ಮೂಲಕ ಈ ಚಿತ್ರ ನಿರ್ಮಿಸುತ್ತಿದ್ದಾರೆ.
ಜಪಾನ್ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿದ್ದು, ಅನು ಇಮ್ಯಾನುಯೆಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಟಾಲಿವುಡ್‌ನ ಹಾಸ್ಯನಟನಾಗಿ ಸುನಿಲ್ ಈ ಚಿತ್ರದ ಮೂಲಕ ತಮಿಳುಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಫಿಲೋಮಿನ್ ರಾಜ್ ಸಂಕಲನ, ಭಾರತೀಯ ಚಿತ್ರರಂಗದ ಐಕಾನಿಕ್ ಸಿನಿಮಾಟೋಗ್ರಾಫರ್ ರವಿವರ್ಮನ್ ಕ್ಯಾಮೆರಾ ಹಿಡಿದಿದ್ದಾರೆ.
