Cinema News
‘666 ಆಪರೇಷನ್ ಡ್ರೀಮ್ ಥಿಯೇಟರ್’ನಲ್ಲಿ ಅಣ್ಣಾವ್ರ ಚಿತ್ರಗಳಲ್ಲಿ ಬಳಸಿದ್ದ ಲೆನ್ಸ್ ಬಳಕೆ
 
																								
												
												
											 
ಹೇಮಂತ್ ಎಂ ರಾವ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘666 ಆಪರೇಷನ್ ಡ್ರೀಮ್ ಥಿಯೇಟರ್’ 1970ರ ದಶಕದ ಚಿತ್ರಗಳಲ್ಲಿ ಬಳಸುತ್ತಿದ್ದ ವಸ್ತ್ರ ವಿನ್ಯಾಸದಿಂದ ಹಿಡಿದು ಆ ಕಾಲದ ಲೆನ್ಸ್‌ಗಳನ್ನೂ ಬಳಸಿ ಚಿತ್ರವನ್ನು ಚಿತ್ರೀಕರಿಸುತ್ತಿದೆ.
1970–1980ರ ದಶಕದಲ್ಲಿ ಡಾ.ರಾಜ್‌ಕುಮಾರ್ ಅವರ ಅನೇಕ ಚಿತ್ರಗಳಲ್ಲಿ ಪರಿಚಯಿಸಲಾದ ‘ವಿಂಟೇಜ್ ಲೊಮೋಸ್’ ಕ್ಯಾಮೆರಾವನ್ನು ಬಳಸಿ ಚಿತ್ರವನ್ನು ಚಿತ್ರೀಕರಿಸಿರುವ ತಂಡ ಈಗಾಗಲೇ ಎರಡು ಹಂತಗಳ ಶೂಟಿಂಗ್‌ನ್ನು ಪೂರ್ಣಗೊಳಿಸಿದೆ. ತಂಡವು ಲೆನ್ಸ್ ಆಯ್ಕೆಗಾಗಿ ಚೆನ್ನೈ, ಮುಂಬೈ ಅಲ್ಲದೆ, ಬೆಂಗಳೂರಿನಲ್ಲೂ ಹುಡುಕಾಟ ನೆಡೆಸಿದೆ .
“ಪ್ರತಿಯೊಂದು ಶಾಟ್, ಬೆಳಕು, ಸೆಟ್ ಎಲ್ಲವೂ ಅಣ್ಣಾವ್ರ ಬಾಂಡ್ ಚಿತ್ರಗಳಾದ ‘ಆಪರೇಷನ್ ಡೈಮಂಡ್ ರಾಕೆಟ್’ ಮತ್ತು ‘ಜೇಡರ ಬಲೆ’ ಚಿತ್ರಗಳ ತರ ಕಾಣ್ಬೇಕು ಅನ್ನೋದು ಆರಂಭದಿಂದಲೇ ಚಿತ್ರತಂಡಕ್ಕೆ ಸ್ಪಷ್ಟವಾಗಿ ಗೊತ್ತಿತ್ತು” ಎಂದು ಈ ಚಿತ್ರದ ಛಾಯಾಗ್ರಾಹಕರಾದ ಅದ್ವೈತ್ ಗುರುಮೂರ್ತಿ ಅವರು ಹೇಳಿದರು.

‘666 ಆಪರೇಷನ್ ಡ್ರೀಮ್ ಥಿಯೇಟರ್’ಗಾಗಿ ನಾವು 1970ರ ದಶಕದ ಡಾ. ರಾಜ್‌ಕುಮಾರ್ ಬಾಂಡ್ ಚಿತ್ರಗಳಂತೆಯೇ ವಿಶಿಷ್ಟವಾದ ಲುಕ್ ಇರಬೇಕು ಎಂದು ಚಿತ್ರತಂಡ ಬಯಸಿತ್ತು. ಅದಕ್ಕಾಗಿ ಸಂಪೂರ್ಣವಾಗಿ ಪೋಸ್ಟ್ ಪ್ರೊಡಕ್ಷನ್‌ನ ಮೇಲೆ ಅವಲಂಬಿಸದೆ, ಶೂಟಿಂಗ್‌ನಲ್ಲಿಯೇ ಚಿತ್ರೀಕರಿಸಲು ಹಳೆಯ ಶೈಲಿಯ ಟಂಗ್‌ಸ್ಟನ್ ಲೈಟ್ಸ್ ಮತ್ತು ವಿಂಟೇಜ್ ಲೆನ್ಸ್‌ಗಳನ್ನು ಬಳಸಿದ್ದೇವೆ.”
“16 ವಿಭಿನ್ನ ಲೆನ್ಸ್ ಸೆಟ್‌ಗಳನ್ನು ಪರೀಕ್ಷಿಸಿ, ಗ್ರೇಡ್ ಮಾಡಿದ ನಂತರ, ನಾವು ವಿಂಟೇಜ್ ಲೊಮೋ ಅನಾಮಾರ್ಫಿಕ್ ಮತ್ತು ಲೊಮೋ ಸ್ಫೆರಿಕಲ್ ಲೆನ್ಸ್‌ಗಳನ್ನು ಆಯ್ಕೆ ಮಾಡಿದೆವು. ಈ ಲೆನ್ಸ್‌ಗಳು ತಮ್ಮ ಆರ್ಗ್ಯಾನಿಕ್ ಫ್ಲೇರ್ಸ್,ಪೇಂಟರೀ ಫಾಲ್-ಆಫ್ ಮತ್ತು ಇಂಪರಿಘೆಕ್ಟ್ ಬ್ಯೂಟಿಗೆ ಪ್ರಸಿದ್ಧವಾಗಿವೆ. ಇದನ್ನೇ ನಾವು 666 ಆಪರೇಷನ್ ಡ್ರೀಮ್ ಥಿಯೇಟರ್‌ನ ಜಗತ್ತನ್ನು ಸೃಷ್ಟಿಸಲು ಬಯಸಿದ್ದು” ಎಂದು ಅವರು ಹೇಳಿದರು.
ಧನಂಜಯ್ ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು ಡಾ. ವೈಶಾಖ್ ಜೆ ಗೌಡ ಅವರ ವೈಶಾಖ್ ಜೆ ಫಿಲ್ಮ್ಸ್ ಸಂಸ್ಥೆ ನಿರ್ಮಿಸುತ್ತಿದೆ. ಹೇಮಂತ್ ಎಂ ರಾವ್ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿದ್ದು, ಅದ್ವೈತ್ ಗುರುಮೂರ್ತಿ ಛಾಯಾಗ್ರಾಹಕರಾಗಿದ್ದಾರೆ. ವಿಶ್ವಾಸ್ ಕಶ್ಯಪ್ ಅವರು ಪ್ರೊಡಕ್ಷನ್ ಡಿಸೈನರ್ ಆಗಿ ತಂಡವನ್ನು ಸೇರಿದ್ದಾರೆ.

ಡಾ. ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಪ್ರೇಕ್ಷಕರಿಗೆ ವಿಶಿಷ್ಟವಾದ ಅನುಭವ ನೀಡಲಿದೆ. ಈ ಚಿತ್ರವನ್ನು ಭಾರೀ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದ್ದು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸುತ್ತಿದೆ.
 
 
																	
																															 
			 
											 
											 
											 
											 
											 
											 
											 
											