Cinema News
ಪೈಲ್ವಾನ್ ಮಾಡಿದ್ದು ಸುದೀಪ್‌ಗಾಗಿ – ಸುನಿಲ್ ಶೆಟ್ಟಿ

ಇದೇ ಗುರುವಾರ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷೆಯ ಚಿತ್ರ ಪೈಲ್ವಾನ್ ಸಿನಿಮಾದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ನಟಿಸಿದ್ದಾರೆ. ಇವರು ಈ ಚಿತ್ರ ಮಾಡಿದ್ದು ಸುದೀಪ್‌ಗಾಗಿ ಎಂದು ಹೇಳಿದ್ದಾರೆ.
‘ನಾನು ನಾಲ್ಕೈದು ವರ್ಷಗಳಿಂದ ನಟನೆಯಿಂದ ದೂರ ಇದ್ದೆ. ಅದಕ್ಕೆ ನನ್ನ ತಂದೆಯ ಅನಾರೋಗ್ಯವೇ ಕಾರಣವಾಗಿತ್ತು. ಅವರ ಜತೆ ಕಾಲ ಕಳೆಯುವ ಕಾರಣಕ್ಕೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಇದೇ ಸಮಯದಲ್ಲಿ ಸುದೀಪ್ ಕರೆ ಮಾಡಿ ಪೈಲ್ವಾನ್ ಬಗ್ಗೆ ಹೇಳಿದರು ನಂತರ ನೀವು ಈ ಪಾತ್ರದಲ್ಲಿ ನಟಿಸಲೇಬೇಕು ಎಂದು ಸಹ ಕೇಳಿದರು ಹಾಗಾಗಿ ನಾನು ಪೈಲ್ವಾನ್‌ನಲ್ಲಿ ನಟಿಸಿದೆ’ ಎಂದು ಹೇಳುತ್ತಾರೆ ಸುನೀಲ್ ಶೆಟ್ಟಿ.
ಸುನೀಲ್ ಶೆಟ್ಟಿ ಪೈಲ್ವಾನ್‌ನಲ್ಲಿ ಸುದೀಪ್ ಅವರ ಮೆಂಟರ್ ಆಗಿ ಕಾಣಿಸಿಕೊಂಡಿದ್ದಾರೆ. ಸಂಬಂಧಗಳ ಸುತ್ತ ನಡೆಯುವ ಒಂದು ಕ್ರೀಡಾ ಮನೋಭಾವದ ಚಿತ್ರ ಇದಾಗಿದೆ. ಇದೇ ಗುರುವಾಗ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಆಕಾಂಕ್ಷ ಸಿಂಗ್ , ಕಬೀರ್ ಸಿಂಗ್ ದುಹಾನ್ ಸೇರಿದಂತೆ ಭಾರಿ ತಾರಾಗಣ ಚಿತ್ರದಲ್ಲಿದೆ. ಹೆಬ್ಬುಲಿ ಕೃಷ್ಣ ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

