Connect with us

Cinema News

ಅಗ್ರಸೇನಾ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ

Published

on

ಕಳೆದ ಶುಕ್ರವಾರ ತೆರೆಕಂಡ ಅಗ್ರಸೇನಾ ಚಿತ್ರಕ್ಕೆ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ  ಉತ್ತಮ‌ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಅಲ್ಲದೆ ಮಾಧ್ಯಮಗಳಲ್ಲಿ ಬಂದ ವಿಮರ್ಶೆಗಳಿಂದ ಖುಷಿಯಾಗಿರುವ ಚಿತ್ರತಂಡ ಪ್ರೆಸ್ ಮೀಟ್ ಕರೆದು ಕೃತಜ್ಞತೆ ಅರ್ಪಿಸಿತು. ಚಿತ್ರದ ಕುರಿತು ಮಾತನಾಡಿದ ನಿರ್ಮಾಪಕಿ ಮಮತಾ ಜಯರಾಮ ರೆಡ್ಡಿ, ನಮ್ಮ ಸಿನಿಮಾ ನಿರೀಕ್ಷೆಯಂತೆ ಯಶಸ್ಸು ಕಂಡಿದೆ. ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದ. ಬಿ.ಸಿ ಸೆಂಟರ್ ನಲ್ಲಿ  ಹೆಚ್ಚಾಗಿ ಜನ ನೋಡುತ್ತಿದ್ದಾರೆ. 25 ದಿನ ಖಂಡಿತ ಆಚರಿಸುತ್ತೆ, ಆಗ ಮತ್ತೆ ಸೇರೋಣ ಎಂದರೆ, ಅವರ ಪತಿ, ನಿರ್ಮಾಪಕ ಜಯರಾಮ ರೆಡ್ಡಿ,ಮಾತನಾಡಿ ಸಿನಿಮಾ ಚೆನ್ನಾಗಿ ಮೂಡಿಬರಲು ಮಾದ್ಯಮ ಕಾರಣ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ನಮ್ಮ ಚಿತ್ರ ಉತ್ತಮವಾಗಿ ಪ್ರದರ್ಶನಗೊಳ್ಳುತ್ತಿದೆ ಎಂದರು.

ನಾಯಕಿ ರಚನಾ ದಶರಥ  ಮಾತನಾಡಿ, ಸಿನಿಮಾ ಯಶಸ್ಸಾಗಲು ಪ್ರೇಕ್ಷಕರೇ ಕಾರಣ. ಇವತ್ತು ರಿಶಿಕಾ, ಅಮರ್, ಆದಿಶೇಷನ ಗೆದ್ದಿದೆ ಎಂದರೆ ಅದಕ್ಕೆ ಡೈರೆಕ್ಟರ್ ವಿಜನ್ ಕಾರಣ. ಇಡೀ ಅಗ್ರಸೇನಾ ಚಿತ್ರ ಗೆದ್ದಿದೆ. ನನ್ನ ಪತಿ ಕೂಡ ನಟ, ನಿರ್ದೇಶಕರು ಏನು ಹೇಳ್ತಾರೋ ಅದನ್ನು ಮಾಡು ಎಂದು ಹೇಳಿದ್ದರು. ಅದನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ. ಚಿತ್ರದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಎಂದರು.
ನಾಯಕ ಅಮರ್ ವಿರಾಜ್ ಮಾತನಾಡಿ ತುಂಬಾ ಖುಷಿ ಆಗ್ತಾ ಇದೆ. ಸಿನಿಮಾ‌ ಎಲ್ಲಾ ಕಡೆ ಉತ್ತಮವಾಗಿ ಓಡುತ್ತಿದೆ. ಜೀವನ ಸಾರ್ಥಕ ಆಯಿತು. ತೆಲುಗು ಸೆಂಟರ್  ಮುಳಬಾಗಿಲಿನಲ್ಲಿಯೂ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಹೊಸಬರು ಚಿತ್ರರಂಗಕ್ಕೆ ಬಂದರೆ ಚಿತ್ರರಂಗ ಬೆಳೆಯುಯತ್ತದೆ. ಹಿರಿಯರು ಕೂಡ ಬೆಂಬಲಿಸಬೇಕು ಎಂದು ಹೇಳಿದರು.

ಮತ್ತೊಬ್ಬ ನಟ ಅಗಸ್ತ್ಯ ಬೆಳಗೆರೆ ಮಾತನಾಡಿ, ಚಿತ್ರ ಯಶಸ್ಸು ಕಾಣಲು ಪ್ರತಿಯೊಬ್ಬರು‌‌‌‌ ನೀಡಿದ ಸಹಕಾರವೇ ಕಾರಣ, ಸಂಗೀತ‌ ನಿರ್ದೇಶಕ, ಛಾಯಾಗ್ರಾಹಕ ಸೇರಿದಂತೆ ಪ್ರತಿಯೊಬ್ಬರ ಶ್ರಮ ಮುಖ್ಯ, ಅಲ್ಲದೆ ಚಿತ್ರದ ಕಥೆ ಮಾಡುವ ಸಮಯದಲ್ಲಿ ರಾತ್ರಿ ನಾಯಕ ಅಮರ್ ಗೆ ಹಾವು ಕಚ್ಚಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿ‌ ಚಿಕಿತ್ಸೆ ಕೊಡಿಸಿ ಅವರನ್ನು ಗುಣಮುಖರನ್ನಾಗಿ ಮಾಡಿದೆವು. ಅಮರ್ ವಿರಾಜ್ ಇದ್ದುದರಿಂದ ಅಗಸ್ತ್ತ ಪಾತ್ರ ಚಿತ್ರದಲ್ಲಿ ಗಮನ ಸೆಳೆಯಲು ಕಾರಣವಾಗಿದೆ ಎಂದರು. 

ನಿರ್ದೇಶಕ ಮುರುಗೇಶ್ ಕಣ್ಣಪ್ಪ ಮಾತನಾಡಿ,  ಅಗ್ರಸೇನಾ ಚಿತ್ರದ ಗೆಲುವು ನಿಮ್ಮ ಗೆಲವು, ಕಥೆಯನ್ನು ಜನರಿಗೆ ತಲುಪಿಸಿ ಚಿತ್ರದ ಯಶಸ್ಸಿಗೆ ಕಾರಣರಾದ ನಿಮ್ಮೆಲ್ಲರಿಗೂ ಧನ್ಯವಾದ.  ನನ್ನ ತಂಡ ನೀಡಿದ ಸಹಕಾರದಿಂದ ಚಿತ್ರಕ್ಕೆ ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ‌.‌ ಚಿತ್ರದಲ್ಲಿ ಸಂದೇಶ ಚೆನ್ನಾಗಿದೆ ಎಂದು ಯುವ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತೊಮ್ಮೆ ಧನ್ಯವಾದಗಳು ಎಂದರು.
ಸಂಗೀತ ನಿರ್ದೇಶಕ ತ್ಯಾಗರಾಜ್ ಮಾತನಾಡಿ ನನ್ನ ತಂದೆ ಸಿನಿಮಾ ನೋಡಿ ಮನೆಗೆಬಂದು ಅಪ್ಪಿಕೊಂಡರು. ಅಮ್ಮ‌ಮುತ್ತು ಕೊಟ್ಟರು. ಇದನ್ನೆ ಮುಂದುವರೆಸು ಎಂದು ಮನಸಾರೆ ಹರಸಿದರು ಎಂದು ಹೇಳಿದರು. ಕಾಮಿಡಿ ಪಾತ್ರ ಮಾಡಿರುವ ರವಿ ಸೇರಿದಂತೆ ಮತ್ತಿತರರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

Spread the love

Continue Reading
Click to comment

Leave a Reply

Your email address will not be published. Required fields are marked *