Cinema News
ಪ್ರಜ್ವಲ್ ದೇವರಾಜ್ ನಿಜವಾದ ಜಂಟಲ್‌ಮನ್

ಗುರುದೇಶಪಾಂಡೆ ನಿರ್ದೇಶನ ಮಾಡಿರುವ ಜಂಟಲ್‌ಮನ್ ಸಿನಿಮಾ ಇದೇ ಶುಕ್ರವಾರದಿಂದ ತೆರೆ ಮೇಲೆ ಬರಲಿದೆ. ಈ ಚಿತ್ರ ಪ್ರಜ್ವಲ್ ದೇವರಾಜ್ ಅವರಿಗೆ ಹೊಸ ಇಮೇಜ್ ಕೊಡಲಿದೆ ಎಂಬ ಅಭಿಪ್ರಾಯ ಗಾಂಧಿನಗರದಲ್ಲಿ ಓಡಾಡುತ್ತಿದೆ.
ಪ್ರಜ್ವಲ್ ಇದುವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ಈ ಚಿತ್ರದ ಮೂಲಕ ಹೊಸ ಇಮೇಜ್‌ನ್ನು ಪಡೆದುಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರು 18 ಗಂಟೆಗಳ ಕಾಲ ನಿದ್ರೆ ಮಾಡುವ ಯುವಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಹೀಗೆ 18 ಗಂಟೆ ನಿದ್ದೆ ಮಾಡಿ ಉಳಿದ ಗಂಟೆಗಳಲ್ಲಿ ಎಲ್ಲರಿಗಿಂತಲೂ ಹೆಚ್ಚು ಆ್ಯಕ್ಟಿವ್ ಆಗಿರುವ ಪಾತ್ರ ಇದಾಗಿದೆ.

ಹಾಗಾಗಿ ಈ ಚಿತ್ರದ ನಂತರ ಪ್ರಜ್ವಲ್ ದೇವರಾಜ್ ನಿಜವಾದ ಜಂಟಲ್‌ಮನ್ ಆಗಿರುತ್ತಾರಂತೆ. ಇನ್ನು ನಾಯಕಿ ನಿಶ್ವಿಕಾ ನಾಯ್ಡು ಸಹ ಪ್ರಜ್ವಲ್ ದೇವರಾಜ್ ಅವರು ನಿಜವಾದ ಜಂಟಲ್‌ಮನ್ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.

Continue Reading