Cinema News
ರಗಡ್ ನಿರ್ದೇಶಕರ ಜತೆ ಗಣೇಶ್ ತ್ರಿಬ್ಬಲ್ ರೈಡಿಂಗ್
ಗೊಲ್ಡನ್ ಸ್ಟಾರ್ ಗಣೇಶ್ ರಗಡ್ ನಿರ್ದೇಶಕ ಮಹೇಶ್ ಗೌಡ ಜತೆ ತ್ರಿಬ್ಬಲ್ ರೈಡಿಂಗ್ ಹೊರಟಿದ್ದಾರೆ. ಹೌದು, ರಗಡ್ ಸಿನಿಮಾ ಮೂಲಕ ಒಂದಷ್ಟು ಗಮನ ಸೆಳೆದಿದ್ದ ಮಹೇಶ್ ಈಗ ಎರಡನೇ ಚಿತ್ರವನ್ನುನಿರ್ದೇಶನ ಮಾಡಲು ಹೊರಟಿದ್ದು ಅದಕ್ಕೆ ಗಣೇಶ್ ಅವರನ್ನು ನಾಯಕರನ್ನಾಗಿಸಿದ್ದಾರೆ.
ಈ ಸಿನಿಮಾದಲ್ಲಿ ಮೂವರು ನಾಯಕಿಯರಿದ್ದು, ಅವರ್ಯಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಈ ಸಿನಿಮಾವನ್ನು ರಾಮ್‌ಗೋಪಾಲ್ ಮತ್ತು ಅರುಣ್‌ಕುಮಾರ್ ಎಂಬುವವರು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯಕ್ಕೆ ರಂಗಾಯಣ ರಘು, ಸಾಧುಕೋಕಿಲಾ ಸೇರಿದಂತೆ ಮತ್ತಿತರರು ನಟಿಸುತ್ತಿದ್ಧಾರೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಈ ವರ್ಷಾಂತ್ಯಕ್ಕೆ ಎಲ್ಲ ವಿವರಗಳು ಲಭ್ಯವಾಗಲಿವೆ.
ಗಣೇಶ್ ಸದ್ಯ ಗಾಳಿಪಟ-2 ಚಿತ್ರದ ಶೂಟಿಂಗ್‌ಗಾಗಿ ಕುದುರೆಮುಖದಲ್ಲಿ ಬೀಡು ಬಿಟ್ಟಿದ್ದಾರೆ. ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಬಿನೇಶನ್‌ನ ನಾಲ್ಕನೇ ಸಿನಿಮಾ ಇದಾಗಿದೆ.