Cinema News
ಕುದುರೆಮುಖದಲ್ಲಿ ಭಟ್ಟರ ಗಾಳಿಪಟ ಹಾರುತ್ತಿದೆ

ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಬಿನೇಶನ್‌ನ ಗಾಳಿಪಟ-2 ಚಿತ್ರ ಕುದುರೆಮುಖದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ.
ಗಣೇಶ್, ದಿಗಂತ್, ಲೂಸಿಯಾ ಪವನ್‌ಕುಮಾರ್ ನಟಿಸುತ್ತಿರುವ ಈ ಸಿನಿಮಾದ ಹಾಡಿನ ದೃಶ್ಯವನ್ನು ಸದ್ಯ ಭಟ್ಟರು ಚಿತ್ರೀಕರಿಸುತ್ತಿದ್ದಾರೆ. ಇದೇ ಸಮಯದಲ್ಲಿ ಗಣೇಶ್ ಮತ್ತು ದಿಗಂತ್ ಇಬ್ಬರೂ ಸೈಕ್ಲಿಂಗ್ ಮಾಡಿಕೊಂಡು ಹೋಗುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಚಿತ್ರದಲ್ಲಿ ವೈಷ್ಣವಿ , ಸಂಯುಕ್ತಾ ಮೆನೆನ್, ಶರ್ಮಿಳಾ ಮಾಂಡ್ರೆ ನಾಯಕಿಯರಾಗಿದ್ದಾರೆ. ನಿಶ್ವಿಕಾ ನಾಯ್ಡು ಅತಿಥಿ ಪಾತ್ರದಲ್ಲಿರಲಿದ್ದಾರೆ. ಇದು ಗಾಳಿಪಟದ ಸಿಕ್ವೇಲ್ ಅಲ್ಲ ಆದರೆ ಅದರಲ್ಲಿ ಇದ್ದ ಮನರಂಜನೆಗಿಂತಲೂ ಅದ್ಧೂರಿ ಮನರಂಜನೆ ಇದರಲ್ಲಿರಲಿದೆ ಎಂದು ಹೇಳುತ್ತಾರೆ ಭಟ್ಟರು.

Continue Reading