Cinema News
ಪುನೀತ್‌ರಾಜ್‌ಕುಮಾರ್ ವರ್ಕೌಟ್‌ಗೆ ಫ್ಯಾನ್ಸ್ ಫಿದಾ

ಸದಾ ಲವಲವಿಕೆಯಿಂದ , ಫಿಟ್ ಆಗಿರುವ ಪುನೀತ್ ರಾಜ್‌ಕುಮಾರ್ ಈಗ ತಾವು ವ್ಯಾವಾಯ ಮಾಡುತ್ತಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದು, ಅದನ್ನು ಕಂಡ ಅಪ್ಪು ಅಭಿಮಾನಿಗಳು ಫಿದಾ ಆಗಿದ್ದಾರೆ.
ತಮ್ಮ ಮನೆಯಲ್ಲಿಯೇ ಇರುವ ಜಿಮ್‌ನಲ್ಲಿ ಪುನೀತ್ ಕಷ್ಟದ ವ್ಯಾಯಾಮಗಳನ್ನು ನೀರು ಕುಡಿದಂತೆ ಮಾಡಿದ್ದಾರೆ. ಇನ್ನು ಪ್ರತಿ ದಿನ ಒಂದು ಗಂಟೆ ಜಿಮ್‌ನಲ್ಲಿ ವರ್ಕೌಟ್ ಮಾಡುವ ಪುನೀತ್, ಫಿಟ್ನೆಸ್ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ವಹಿಸುತ್ತಾರೆ.
ಶುಭಕರ್ ಶೆಟ್ಟಿ ಎಂಬುವವರು ಬಹಳ ವರ್ಷಗಳಿಂದ ಪುನೀತ್ ಅವರಿಗೆ ಪರ್ಸನಲ್ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಯುವರತ್ನದಲ್ಲಿ ಕಾಲೇಜು ವಿದ್ಯಾರ್ಥಿಯಾಗಿ ನಟಿಸುತ್ತಿರುವ ಪುನೀತ್ ಆ ಚಿತ್ರ ಆರಂಭವಾದಾಗಿನಿಂದಲೂ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ.

Continue Reading