Cinema News
ಅಂದುಕೊಂಡಿದ್ದಕ್ಕಿಂತ ಮುಂಚೆಯೇ ಆಗಲಿದೆ “ಒಡೆಯ”ನ ದರ್ಶನ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದಲ್ಲಿ ಮೂಡಿಬಂದಿರುವ ಆಕ್ಷ್ಯನ್ ಫ್ಯಾಮಿಲಿ ಎಂಟರ್ಟೇನರ್ “ಒಡೆಯ“ ಬಿಡುಗಡೆಗೆ ಸಜ್ಜಾಗುತ್ತಿದೆ.
ಬಹು ನಿರೀಕ್ಷಿತ ಚಿತ್ರ ಒಡೆಯ ಇದೇ ಡಿಸೆಂಬರ್ 2ಕ್ಕೆ ರಿಲೀಸ್ ಆಗಲಿದೆ. ಅದಕ್ಕಿಂತ ಮುನ್ನ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ಈ ಸಿನಿಮಾವನ್ನು ಎಂ ಡಿ ಶ್ರೀಧರ್ ನಿರ್ದೇಶನ ಮಾಡಿದ್ದಾರೆ.
ತಮಿಳಿನ ವೀರಂ ಚಿತ್ರದ ರಿಮೇಕ್ ಆಗಿರುವ ಒಡೆಯದಲ್ಲಿ ದರ್ಶನ್ ನಾಲ್ವರು ತಮ್ಮಂದಿರ ಪ್ರೀತಿಯ ಅಣ್ಣನಾಗಿ ನಟಿಸಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್ ಮತ್ತು ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
ಈ ಸಿನಿಮಾವನ್ನು ದರ್ಶನ್ ಅವರ ನೆಚ್ಚಿನ ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದಾರೆ. ದರ್ಶನ್‌ಗೆ ರಾಘವಿ ತಿಮ್ಮಯ್ಯ ಎಂಬ ಹೊಸ ಹುಡುಗಿ ಜತೆಯಾಗಿದ್ದಾರೆ. ಪಂಕಜ್, ಸಾಧುಕೋಕಿಲಾ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ವಿಶೇಷ ಎಂದರೆ ಸುದೀಪ್ ಮತ್ತು ಸಲ್ಮಾನ್ ಖಾನ್ ನಟನೆಯ ದಬಾಂಗ್-3 ಸಹ ಡಿಸೆಂಬರ್ ತಿಂಗಳಿನಲ್ಲೇ ರಿಲೀಸ್ ಆಗುವುದರಿಂದ ಸ್ಟಾರ್ ವಾರ್ ನಡೆಯಬಹುದು.
