Reviews
‘ಡಾಟರ್ ಆಫ್ ಪಾರ್ವತಮ್ಮ’ದಲ್ಲಿ ಮಿಂಚಿದ ಹರಿಪ್ರಿಯಾ – ಟ್ರೇಲರ್ ವಿಮರ್ಶೆ

ಹರಿಪ್ರಿಯಾ ಮತ್ತು ಸುಮಲತಾ ಅಂಬರೀಷ್ ನಟನೆಯ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಶಂಕರ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಹರಿಪ್ರಿಯಾ ಐಪಿಎಸ್ ಆಫೀಸರ್ ಆಗಿ ನಟಿಸುತ್ತಿದ್ದಾರೆ. ಟ್ರೇಲರ್‌ನಲ್ಲಿ ಚಿತ್ರ ಯಾವುದೋ ಒಂದು ಮರ್ಡರ್ ಮಿಸ್ಟರಿಯನ್ನು ಬೇದಿಸುವ ಕಥೆ ಹೊಂದಿದೆ ಎಂಬುದು ತಿಳಿಯುತ್ತದೆ.
ಹರಿಪ್ರಿಯಾ ಬೈಕ್ ಓಡಿಸುವುದು, ಫೈಟ್ ಮಾಡುವುದು ಎಲ್ಲವನ್ನು ಮಾಡಿದ್ದಾರೆ. ಈ ಮೂಲಕ ಹರಿಪ್ರಿಯಾ ತಾನು ಯಾವುದೇ ಪಾತ್ರವಾದರೂ ಲೀಲಾಜಾಲವಾಗಿ ನಿರ್ವಹಿಸುತ್ತೇನೆ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಮೇಲ್ನೋಟಕ್ಕೆ ಇದು ರಿವೆಂಜ್ ಸ್ಟೋರಿನಾ ಎಂಬ ಸುಳಿವು ಸಿಗುತ್ತಿದೆ. ಸುಮಲತಾ ಅವರು ಹರಿಪ್ರಿಯಾ ಅವರ ತಾಯಿ ಪಾತ್ರ ಮಾಡಿದ್ದಾರೆ.
ಈ ಸಿನಿಮಾ ಇದೇ 24ಕ್ಕೆ ಬಿಡುಗಡೆಯಾಗಲಿದೆ.


Continue Reading