Cinema News
‘ಒಡೆಯ’ ಟ್ರೇಲರ್‌ಗೆ ಅಭಿಮಾನಿಗಳು ಫಿದಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಒಡೆಯ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಜನ ನೋಡುತ್ತಿದ್ದಾರೆ
ಭಾನುವಾರ ಬೆಳಗ್ಗೆಯಷ್ಟೇ ರಿಲೀಸ್ ಆದ ಟ್ರೇಲರ್‌ನ್ನು ಸಂಜೆ 5 ರ ಹೊತ್ತಿಗೆ 7 ಲಕ್ಷ ಜನ ನೋಡಿದ್ದಾರೆ. ಎರಡೇ ದಿನಕ್ಕೆ 15 ಲಕ್ಷ ಜನರು ಟ್ರೈಲರ್ ಅನ್ನು ವೀಕ್ಷಿಸಿದ್ದಾರೆ.
ಈ ಟ್ರೇಲರ್‌ನಲ್ಲಿ ದರ್ಶನ್ ಅವರ ಗತ್ತು ಗೈರತ್ತು ಜತೆಗೆ ಆ್ಯಕ್ಷನ್ ದೃಶ್ಯಗಳು ಇವೆ. ಇವೆಲ್ಲದರ ಜತೆಗೆ ನಾಯಕಿ ಸನಾ ಜತೆಗಿನ ಹಾಡಿನ ಝಲಕ್ ಕೂಡಾ ಇದ್ದು, ರೈತರ ಜೀವ ಹಿಂಡುವರವನ್ನು ಸುಮ್ಮನೆ ಬಿಡುವುಡಿಲ್ಲ ಎಂಬ ಖಡಕ್ ಡೈಲಾಗ್ ಕೂಡಾ ಇದೆ.
ಡಿಸೆಂಬರ್ 12ಕ್ಕೆ ಚಿತ್ರ ತೆರೆಗೆ ಬರಲಿದ್ದು, ಎಂ ಡಿ ಶ್ರೀಧರ್ ನಿರ್ದೇಶನ ಮಾಡಿದ್ದಾರೆ. ಒಟ್ಟಿನಲ್ಿಲ ಟ್ರೇಲರ್‌ನಿಂದಲೇ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡಿದ್ದಾರೆ ನಿರ್ದೇಶಕರು

Continue Reading