Cinema News
ದರ್ಶನ್ ಮಾಡ್ತಾ ಇರೋದು ವಿಷ್ಣು ನಟಿಸಬೇಕಿದ್ದ ಪಾತ್ರ

ಚಾಲೇಂಜಿಂಗ್ ಸ್ಟಾರ್ ದರ್ಶನ್ ನಟನೆಯ ಗಂಡುಗಲಿ ಮದಕರಿ ನಾಯಕ ಸಿನಿಮಾದ ಮುಹೂರ್ತ ಸದ್ಯದಲ್ಲೆ ಆಗಲಿದ್ದು ದರ್ಶನ್ ಮದಕರಿ ನಾಯಕನಾಗಿ ಮಿಂಚಲಿದ್ದಾರೆ. ಅಂದಕೊಂಡಂತೆ ಆಗಿದ್ದರೆ ಮದಕರಿ ನಾಯಕನ ಪಾತ್ರದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ನಟಿಸಬೇಕಿತ್ತಂತೆ.
ಹೌದು, ಬಹಳ ವರ್ಷಗಳ ಹಿಂದೆಯೇ ತರಾಸು ಅವರ ದುರ್ಗಾಸ್ತಮಾನ ಕಾದಂಬರಿಯನ್ನು ನಿರ್ಮಾಪಕ ಸಿವಿಎಲ್ ಶಾಸ್ತ್ರಿಯವರು ರೈಟ್ಸ್ ತೆಗೆದುಕೊಂಡು ಬಂದು ಸಿನಿಮಾ ಮಾಡುವುದಾಗಿ ಹೇಳಿದ್ದರಂತೆ. ಅದನ್ನು ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಬೇಕಿತ್ತು. ಆದರೆ ಅದ್ಯಾಕೋ ಸೆಟ್ಟೇರಲಿಲ್ಲ, ಹಾಗಾಗಿ ವಿಷ್ಣುಗೆ ಮದಕರಿ ನಾಯಕನಾಗುವ ಅದೃಷ್ಟ ಇಲ್ಲದೇ ಹೋಯಿತು.
ಈಗ ದರ್ಶನ್ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮದಕರಿ ನಾಯಕರಾಗುತ್ತಿದ್ದಾರೆ. ಈಗಾಗಲೇ ಫಸ್ಟ್ ಲುಕ್, ಮುಹೂರ್ತ ಮತ್ತಿತರ ವಿಷಯಗಳಿಂದ ಚಿತ್ರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

Continue Reading