Cinema News
ಒಂದೇ ಸಿನಿಮಾದಲ್ಲಿ ನಟಿಸ್ತಾರೆ ಶಿವರಾಜ್‌ಕುಮಾರ್ ಮತ್ತು ದರ್ಶನ್

- ಚಾಲೆಂಜಿಂಗ್ ಸ್ಟಾರ್ ದರ್ಶನ್, ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ ಒಂದೇ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಅಭಿಮಾನಿಗಳ ಮಿಲಿಯನ್ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಉತ್ತಮ ಕಥೆ ಬಂದರೆ ನಾವಿಬ್ಬರೂ ನಟಿಸಲು ರೆಡಿ ಎಂದು ಸ್ವತಃ ಶಿವಣ್ಣ ಮತ್ತು ದರ್ಶನ್ ತಿಳಿಸಿದ್ದಾರೆ.
ರಾಜ್ ಕುಟುಂಬದ ಧ್ರುವನ್ ನಟನೆಯ ಮೊದಲ ಚಿತ್ರದ ಮುಹೂರ್ತದಲ್ಲಿ ಭೇಟಿಯಾದ ಇಬ್ಬರೂ ಮಾಧ್ಯಮದವರಿಗೆ ಈ ಮಾತುಗಳನ್ನು ಹೇಳಿದ್ದಾರೆ. ‘ನಾನು ದರ್ಶನ್ ಎಲ್ಲೇ ಸಿಕ್ಕರೂ ಸಿನಿಮಾಗಳ ಬಗ್ಗೆ ಮಾತನಾಡುತ್ತಿರುತ್ತೇವೆ. ಹಾಗಾಗಿ ನಾವಿಬ್ಬರು ಒಟ್ಟಿಗೆ ನಟಿಸಲು ಸಮಸ್ಯೆ ಇಲ್ಲ. ಅಲ್ಲದೇ ಅಂತಹ ಕಥೆ ಸೃಷ್ಟಿಯಾಗಬೇಕು. ಸುಮ್ಮನೆ ಮಾಡಬೇಕು ಎಂದು ಮಾಡಬಾರದು.’ಎಂದು ಶಿವಣ್ಣ ಹೇಳಿದರು.
ಇದಕ್ಕೆ ದರ್ಶನ್ ಕೂಡಾ ಮಾತು ಸೇರಿಸಿ ‘ನಮ್ಮಿಬ್ಬರನ್ನು ಹ್ಯಾಂಡಲ್ ಮಾಡುವಂತಹ ನಿರ್ದೇಶಕರು ಇದ್ದರೆ ಬರಲಿ ನಾವು ನಟಿಸುತ್ತೇವೆ. ಜತೆಗೆ ಕಥೆ ಕೂಡಾ ವಿಭಿನ್ನವಾಗಿ ಮತ್ತು ನಮ್ಮ ಇಬ್ಬರ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಇರಬೇಕು. ಜತೆಗೆ ಶಿವಣ್ಣ ಲಾಂಗ್ ಹಿಡಿದು ನಿಂತರೆ ನಾನು ಹಿಂದೆ ಲಾಂಗ್ ಹಿಡಿದು ನಿಲ್ಲುತ್ತೇನೆ. ಅವರೇ ಸಿನೀಯರ್ ಎಂದು ಹೇಳಿದರು.’ಅಲ್ಲಿಗೆ ಶಿವಣ್ಣ ಮತ್ತು ದಚ್ಚು ಒಟ್ಟಿಗೆ ನಟಿಸಲು ಗ್ರೀನ್ ಸಿಗ್ನಲ್ ಸಿಕ್ಕಿದ್ದು, ನಿರ್ದೇಶಕರು ಮತ್ತು ಕಥೆಗಾರರು ಅಂತಹ ಅದ್ಭುತ ಕಥೆಯನ್ನು ಸೃಷ್ಟಿ ಮಾಡಬೇಕಿದೆ.
ಇನ್ನು ಧ್ರುವನ್ ಜತೆ ಈ ಚಿತ್ರದಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ನಟಿಸುತ್ತಿದ್ದಾರೆ. ರಘು ಕೋವಿ ನಿರ್ದೇಶನ ಮಾಡುತ್ತಿದ್ದಾರೆ.
