Cinema News
400 ಚಿತ್ರಮಂದಿರದಲ್ಲಿ ದಬಾಂಗ್ ಅಬ್ಬರ

ಸುದೀಪ್ ಮತ್ತು ಸಲ್ಮಾನ್‌ಖಾನ್ ಕಾಂಬಿನೇಶನ್‌ನ ಬಹು ನಿರೀಕ್ಷೆಯ ಚಿತ್ರ ದಬಾಂಗ್-3 ನಾಳೆ [ಡಿ 20] ಕರ್ನಾಟಕದದ್ಯಾಂತ 400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಬರೀ ಕನ್ನಡ ಮತ್ತು ಹಿಂದಿ ಭಾಷೆ ಮಾತ್ರ ಕರ್ನಾಟಕದಲ್ಲಿ ರಿಲೀಸ್ ಆಗುತ್ತಿದೆ. ತಮಿಳು, ತೆಲುಗು ಭಾಷೆಯಲ್ಲಿ ಯಾವುದೇ ಕಾರಣಕ್ಕೆ ರಿಲೀಸ್ ಮಾಡುವುದಿಲ್ಲ ಎಂದು ವಿತರಕ ಜಾಕ್ ಮಂಜು ಹೇಳಿದ್ದಾರೆ.
ಇದೊಂದು ಕನ್ನಡ ಚಿತ್ರವಾಗಿದ್ದು, ಅದರಂತೆ ಟ್ರೀಟ್ ಮಾಡಬೇಕು ಎಂದು ಸುದೀಪ್ ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಈ ಚಿತ್ರಕ್ಕೆ ಕಂಪ್ಲೀಟ್ ಕನ್ನಡ ಸಿನಿಮಾ ಕಲಾವಿದರೇ ಡಬ್ಬಿಂಗ್ ಮಾಡಿರುವುದು ಇದರ ಹೈಲೈಟ್ ಆಗಿದೆ. ಬೆಂಗಳೂರು , ಮೈಸೂರಿನಂತಹ ನಗರಗಳಲ್ಲಿ ಹಿಂದಿ ಮತ್ತು ಕನ್ನಡ ಎರಡೂ ಭಾಷೆಯಲ್ಲಿ ಚಿತ್ರವನ್ನು ರಿಲೀಸ್ ಮಾಡಲಾಗುತ್ತಿದೆ. ಉಳಿದಂತೆ ಬಿ ಸಿ ಕೇಂದ್ರಗಳಲ್ಲಿ ಕನ್ನಡ ಮಾತ್ರ ರಿಲೀಸ್ ಮಾಡುತ್ತಿದ್ದು, ಅವರೆಲ್ಲರೂ ಸಲ್ಮಾನ್‌ಖಾನ್ ಬಾಯಲ್ಲಿ ಕನ್ನಡ ಕೇಳುವುದು ಪಕ್ಕಾ ಎನ್ನುತ್ತಾರೆ ಮಂಜು.
ಒಟ್ಟಿನಲ್ಲಿ ಕನ್ನಡದಲ್ಲಿ ಚುಲ್‌ಬುಲ್ ಪಾಂಡೆಯ ಪಂಚ್ ಡೈಲಾಗ್‌ಗಳನ್ನು ನಾಳೆಯಿಂದ ಕನ್ನಡಿಗರು ಕೇಳಬಹುದು.
