Cinema News
ಮಯೂರ ಮೋಷನ್ ಪಿಕ್ಚರ್ಸ್ ನಿರ್ಮಾಣದ ನೂತನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಡಿ.ಜೆ.ಚಕ್ರವರ್ತಿ (ಚಂದ್ರಚೂಡ್) .

ನಿರ್ದೇಶಕರ ಹುಟ್ಟುಹಬ್ಬದಂದು ಮಿಲಿಂದ್ ಗೌತಮ್ ನಾಯಕನಾಗಿ ನಟಿಸುತ್ತಿರುವ ಈ ನೂತನ ಚಿತ್ರದ ಟೀಮ್ ಅನೌನ್ಸ್ .
ಮಯೂರ ಮೋಷನ್ ಪಿಕ್ಚರ್ಸ್ ನ ನಿರ್ಮಾಪಕರು ಮಂಜುನಾಥ್ D ಅವರು ಅನ್ ಲಾಕ್ ರಾಘವ ನಂತರ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ.
ಮಿಲಿಂದ್ ಗೌತಮ್ ನಾಯಕ ನಟರಾಗಿರುವ ಈ ಸಿನೆಮಾಗೆ ನಿರ್ದೇಶಕರ ಕ್ಯಾಪ್ ತೊಟ್ಟಿರುವುದು ಬಹುಮುಖ ಪ್ರತಿಭೆ ಡಿ. ಜೆ. ಚಕ್ರವರ್ತಿ (ಚಂದ್ರಚೂಡ್). ಬಿಗ್ ಬಾಸ್ ಖ್ಯಾತಿ, ಚಳುವಳಿ, ಬರಹಗಾರ, ನಿರ್ದೇಶಕ ಚಕ್ರವರ್ತಿ ಏಳು ವರ್ಷಗಳ ನಂತರ ನಿರ್ದೇಶನ ಮಾಡುತ್ತಿದ್ದಾರೆ.

“ಅನ್ ಲಾಕ್ ರಾಘವ” ನಂತರ ಮಿಲಿಂದ್ ಗೌತಮ್ ಅವರು ಸತತ ಮೂರು ತಿಂಗಳುಗಳಿಂದ ಈ ಹೊಸ ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಬೇರೆ ಬೇರೆ ನಿರ್ದೇಶಕರಿಗೆ ಹಲವು ಸಿನಿಮಾಗಳನ್ನು ಬರೆಯುತ್ತಿರುವ ಚಕ್ರವರ್ತಿ ಈ ಸಿನಿಮಾವನ್ನು ತಾವೇ ಬರೆದು ನಿರ್ದೇಶಿಸುತ್ತಿದ್ದಾರೆ.
ಮಣಿಕಾಂತ್ ಕದ್ರಿ ಸಂಗೀತ, ಮಧು ತುಂಬನಕೆರೆ ಸಂಕಲನ, ಯೋಗೇಶ್ವರನ್ ಛಾಯಾಗ್ರಹಣ, ಕಾರ್ಯಕಾರಿ ನಿರ್ಮಾಪಕರಾಗಿ ಪ್ರಶಾಂತ್ ಬಾಗೂರು, ಡಿಜಿಟಲ್ ಮಾರ್ಕೆಟಿಂಗ್ ಸುನೀಲ್ ಮಾನೆ, ಸಹ ನಿರ್ದೇಶಕರಾಗಿ ಚಂದ್ರಶೇಖರ ಮುದಬಾವಿ ಮುಂತಾದವರ ತಂಡವಿದೆ.

ಈಗಾಗಲೇ ಕದ್ರಿ ಮಣಿಕಾಂತ್ ಹಾಡುಗಳು ಸಂಯೋಜನೆಯಲ್ಲಿದು, ಚಿತ್ರೀಕರಣಕ್ಕೆ ಪೂರ್ವ ತಯಾರಿ ಭರದಿಂದ ಸಾಗಿದೆ.
ಆಗಸ್ಟ್ 18ರಂದು ಟೀಸರ್ ಚಿತ್ರೀಕರಣ ನಡೆಯಲಿದ್ದು, ಸೆಪ್ಟೆಂಬರ್ 2 , ಅಭಿನಯ ಚಕ್ರವರ್ತಿ ಸುದೀಪ್ ರವರ ಹುಟ್ಟಿದ ದಿನದಂದು ಟೀಸರ್ ಬಿಡುಗಡೆ ಮತ್ತು ಎಲ್ಲಾ ಮಾಹಿತಿಗಳು ಲಭ್ಯವಾಗಲಿದೆ.
ನಿರ್ದೇಶಕರ ಹುಟ್ಟುಹಬ್ಬದಂದು(ಆಗಸ್ಟ್ 15) ಟೀಮ್ ಅನೌನ್ಸ್ ಆಗಲಿದೆ. ಈ ಪೋಸ್ಟರ್ ನಲ್ಲಿರುವ ಸ್ಕ್ಯಾನ್ ಮಾಡಿ ಮ್ಯಾಜಿಕ್ ನೋಡಿ! ನಿಮಗೊಂದು ಅಪರೂಪದ ವಿಷಯ ಸಿಗಲಿದೆ.
