Connect with us

Reviews

“ಬ್ರಹ್ಮಚಾರಿ” ಟ್ರೇಲರ್ ಇಷ್ಟ ಪಟ್ಟ ಸ್ಯಾಂಡಲ್‌ವುಡ್ ಅಭಿಮಾನಿಗಳು

Published

on

ಸತೀಶ್‌ ನೀನಾಸಂ ಮತ್ತು ಅದಿತಿ ಪ್ರಭುದೇವ ನಟನೆಯ ಬ್ರಹ್ಮಚಾರಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ಸಿನಿಮಾದಲ್ಲಿರುವ ಅವನ ಕೈನಲ್ಲಿ ಏನು ಆಗಲ್ಲ ಎನ್ನುವ ಡೈಲಾಗ್‌ನ್ನು ಜನ ಎಂಜಾಯ್‌ ಮಾಡುತ್ತಿದ್ದಾರೆ.

ಉದಯ್‌ ಮೆಹ್ತಾ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ಚಂದ್ರಮೋಹನ್‌ ನಿರ್ದೇಶನ ಮಾಡಿದ್ದಾರೆ. ಸತೀಶ್‌ ನೀನಾಸಂ ಜತೆ ಅಚ್ಯುತ್‌ಕುಮಾರ್‌, ದತ್ತಣ್ಣ, ಶಿವರಾಜ್‌ ಕೆ ಆರ್‌ ಪೇಟೆ, ಅಶೋಕ್‌, ಪದ್ಮಜಾ ರಾವ್‌ ನಟಿಸಿದ್ದಾರೆ.

ಟ್ರೇಲರ್‌ ನೋಡಿದ ಮೇಲೆ ಲೈಂಗಿಕ ಸಮಸ್ಯೆ ಇರುವ ಯುವಕನೊಬ್ಬನ ನೋವು,ನಲಿವಿನ ಕಥೆ ಈ ಚಿತ್ರದಲ್ಲಿದೆ ಎಂಬುದು ಗೊತ್ತಾಗುತ್ತದೆ. ಅದಕ್ಕೆ ತಕ್ಕಂತೆ ಸಿಕ್ಕಾಪಟ್ಟೆ ಡಬಲ್‌ ಮೀನಿಂಗ್‌ ಡೈಲಾಗ್‌ಗಳು ಚಿತ್ರದಲ್ಲಿವೆ ಎಂಬುದು ಟ್ರೇಲರ್‌ನಲ್ಲಿ ರಿವೀಲ್‌ ಆಗಿದೆ. ಡಬಲ್ ಮೀನಿಂಗ್ ಸಂಭಾಷಣೆ ಎಲ್ಲೂ ಮುಜುಗರ ಪಡಿಸುವಂತಿಲ್ಲ ಎಂಬುದೇ ಅದರ ಪ್ಲಸ್ ಪಾಯಿಂಟ್.

ಈ ಸಿನಿಮಾದ ತಡ್ಕ ತಡ್ಕ ಹಾಡು ಬಿಡುಗಡೆಯಾಗಿ ವೈರಲ್‌ ಆಗಿತ್ತು. ಈಗ ಟ್ರೇಲರ್‌ ಕೂಡಾ ಶರವೇಗದಲ್ಲಿ ಸಾಗುತ್ತಿದ್ದು, ಜನ ಈ ಚಿತ್ರವನ್ನು ಖಂಡಿತಾ ಇಷ್ಟಪಡುತ್ತಾರೆ ಎನ್ನುತ್ತಿದೆ ಚಿತ್ರತಂಡ.

Spread the love

Continue Reading