Cinema News
ಫೆ. 14ಕ್ಕೆ ಬಿಚ್ಚುಗತ್ತಿ ಟ್ರೇಲರ್ ರಿಲೀಸ್

ಹರಿ ಸಂತೋಷ್ ನಿರ್ದೇಶನ ಮಾಡಿರುವ ಬಿಚ್ಚುಗತ್ತಿ ಸಿನಿಮಾದ ಟ್ರೇಲರ್ ಇದೇ ಫೆ 14ಕ್ಕೆ ರಿಲೀಸ್ ಆಗಲಿದೆ. ಈ ಟ್ರೇಲರ್‌ನ್ನು ಕನ್ನಡದ ದೊಡ್ಡ ಸ್ಟಾರ್ ಒಬ್ಬರು ರಿಲೀಸ್ ಮಾಡಲಿದ್ದಾರಂತೆ.
ಚಿತ್ರದುರ್ಗ ನಾಯಕರಲ್ಲಿ ಒಬ್ಬರಾದ ಭರಮಣ್ಣ ನಾಯಕನ ಕಥೆಯಿರುವ ಈ ಸಿನಿಮಾದಲ್ಲಿ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜ್ ವರ್ಧನ್ ನಾಯಕನಾಗಿ ನಟಿಸಿದ್ದಾರೆ. ಬಾಹುಬಲಿ ಖ್ಯಾತಿಯ ಪ್ರಭಾಕರ್ ವಿಲನ್ ಆಗಿದ್ದು ಟೀಸರ್‌ಗೆ ಹೆಚ್ಚಿನ ಜನ ಬೆಂಬಲ ಸಿಕ್ಕಿದೆ.
ಇನ್ನು ಸಿನಿಮಾದ ಹಾಡುಗಳು ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಬಿ ಎಲ್ ವೇಣು ಅವರ ಕಾದಂಬರಿಯನ್ನು ಆಧರಿಸಿ ಈ ಚಿತ್ರವನ್ನು ಮಾಡಲಾಗಿದೆ. ಸದ್ಯಕ್ಕೆ ಚಾಪ್ಟರ್ -1 ಮಾತ್ರ ರಿಲೀಸ್ ಆಗಲಿದ್ದು, ಇನ್ನೊಂದು ಭಾಗ ಕೆಲ ದಿನಗಳ ನಂತರ ಬಿಡುಗಡೆಯಾಗಲಿದೆ.

Continue Reading