Cinema News
ಸದ್ಯದಲ್ಲೇ 100 ಕೋಟಿ ಕ್ಲಬ್ ಸೇರಲಿದ್ದಾನೆ ನಾರಾಯಣ

ರಕ್ಷಿತ್ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ ಚಿತ್ರ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಜನ ಇದೇ ರೀತಿ ಸಿನಿಮಾ ನೋಡುತ್ತಿದ್ದರೆ ನಾರಾಯಣನ ಜೋಳಿಗೆ ಆದಷ್ಟು ಬೇಗ ನೂರು ಕೋಟಿಯಿಂದ ತುಂಬುತ್ತದೆ ಎನ್ನಲಾಗುತ್ತಿದೆ.
ಬೆಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್ ಮತ್ತು ಸಿಂಗಲ್ ಸ್ಕ್ರೀನ್‌ಗಳು ಸೇರಿ ಒಟ್ಟು 400 ಕ್ಕೂ ಹೆಚ್ಚು ಶೋಗಳು ನಡೆಯುತ್ತಿವೆ. ಉಳಿದಂತೆ ಕರ್ನಾಟಕದ ಬೇರೆಡೆ ಇರುವ ಚಿತ್ರಮಂದಿರಗಳ ಶೋಗಳನ್ನು ಲೆಕ್ಕ ಹಾಕಿಕೊಂಡರೆ ರಾಜ್ಯಾದ್ಯಂತ ಸಾವಿರಕ್ಕೂ ಅಧಿಕ ಶೋಗಳು ನಡೆಯುತ್ತಿವೆ. ಎಲ್ಲವೂ ಹೌಸ್ ಫುಲ್ ಆಗುತ್ತಿರುವುದರಿಂದ ಕಲೆಕ್ಷನ್ ಕೊಂಚ ಹೆಚ್ಚಾಗಿದೆ. ಶುಕ್ರವಾರದಿಂದ ಸೋಮವಾರದವರೆಗೆ ನಾಲ್ಕು ದಿನಕ್ಕೆ ಒಟ್ಟು 40 ಕೋಟಿ ರೂ. ಸಂಗ್ರಹವಾಗಿದೆ ಎನ್ನುವ ಸುದ್ದಿಗಳು ರಾಜ್ಯಾದ್ಯಂತ ಹಬ್ಬಿದೆ. ಇದೇ ಸ್ಪೀಡ್‌ನಲ್ಲಿ ಗಲ್ಲಾಪಟ್ಟಿಗೆ ತುಂಬುತ್ತಿದ್ದರೆ 100 ಕೋಟಿ ರೂ. ಕಲೆಕ್ಷನ್ ಆಗುವುದು ಕಷ್ಟವೇನಲ್ಲ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.

Continue Reading