Cinema News
ತೆಲುಗಿನ ಖ್ಯಾತ ನಟ ‘ಅಲಿ’ಗೆ ಮಾತು ಬರಲ್ಲ

ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿ ವರ್ಗವನ್ನು ಸೃಷ್ಟಿ ಮಾಡಿಕೊಂಡಿರುವ ಹಾಸ್ಯ ನಟ ಅಲಿ ‘ಕೆಂಪೇಗೌಡ-2’ನಲ್ಲಿ ಮೂಗನ ರೋಲ್‌ನಲ್ಲಿ ನಟಿಸಿದ್ದಾರೆ.
ಈ ಬಗಗೆ ಪಾಪ್ ಕಾರ್ನ್ ಕನ್ನಡ ಜತೆ ಮಾತನಾಡಿರುವ ಆಲಿ ‘ನಾನು ಈ ಸಿನಿಮಾದಲ್ಲಿ ಮಾತು ಬಾರದವನಾಗಿ ಕಾಣಿಸಿಕೊಂಡಿದ್ದೇನೆ. ಕೋಮಲ್ ನನ್ನ ಹತ್ತು ವರ್ಷದ ಗೆಳೆಯ ಹಾಗಾಗಿ ನಾನು ಈ ಸಿನಿಮಾದಲ್ಲಿ ನಟಿಸಿದೆ. ಜತೆಗೆ ನಿರ್ದೇಶಕ ಶಂಕರೇಗೌಡ ಸಹ ಉತ್ತಮವಾಗಿ ಕಥೆ ಮಾಡಿಕೊಂಡಿದ್ದರು. ನನ್ನ ಪಾತ್ರದ ಬಗ್ಗೆ ಅವರು ಹೇಳಿದಾಗ ನನಗೆ ಖುಷಿಯಾಯಿತು. ಜತೆಗೆ ಕೋಮಲ್‌ಗಾಗಿ ಈ ಸಿನಿಮಾದಲ್ಲಿ ನಾನು ನಟಿಸಿದ್ದೇನೆ. ’ಎನ್ನುತ್ತಾರೆ ಆಲಿ.

‘ಇನ್ನು ಒಬ್ಬ ಕಾಮಿಡಿ ನಟ ಇಷ್ಟು ದೊಡ್ಡ ಮಟ್ಟದಲ್ಲಿ ಆ್ಯಕ್ಷನ್ ಸಬ್ಜೆಕ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ನನಗೆ ಹೆಮ್ಮೆಯ ವಿಷಯ ಇಂತಹ ಸಿನಿಮಾದಲ್ಲಿ ನಾನು ಸಹ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿರುವುದು ನನಗೆ ಖುಷಿಯಾಗಿದೆ. ಜತೆಗೆ ಜನ ಈ ಚಿತ್ರವನ್ನು ಖಂಡಿತಾ ಇಷ್ಟಪಡುತ್ತಾರೆ’ಅಂತಾರೆ ಆಲಿ.
ಕೆಂಪೇಗೌಡ-2 ಸಿನಿಮಾ ಇದೇ ಆಗಸ್ಟ್ 9ಕ್ಕೆ ಬಿಡುಗಡೆಯಾಗಲಿದೆ. ಕೋಮಲ್, ಶ್ರೀಶಾಂತ್, ಸುಚೇಂದ್ರ ಪ್ರಸಾದ್ ಸೇರಿದಂತೆ ಸಾಕಷ್ಟು ಮಂದಿ ಈ ಸಿನಿಮಾದಲ್ಲಿ ನಟಿಸಿದ್ದಾರೆ.
