Cinema News
ಬಡವ ರಾಸ್ಕಲ್‌ಗೆ ಈಗ ಡಾಲಿ ಮಾತ್ರ ನಿರ್ಮಾಪಕ

ಡಾಲಿ ಧನಂಜಯ ನಟನೆಯ ಬಡವ ರಾಸ್ಕಲ್ ಚಿತ್ರಕ್ಕೆ ಈಗ ಧನಂಜಯ ಅವರೊಬ್ಬರೆ ನಿರ್ಮಾಪಕರು. 2019 ಆಗಸ್ಟ್‌ನಲ್ಲಿ ಆರಂಭವಾಗಿದ್ದ ಈ ಚಿತ್ರವನ್ನು ಶಂಕರ್ ಎಂಬ ಹೊಸ ಪ್ರತಿಭೆ ನಿರ್ದೇಶನ ಮಾಡುತ್ತಿದ್ದಾರೆ.
ಸಿನಿಮಾ ಆರಂಭವಾದಾಗ ಡಾಲಿ ಪಿಕ್ಚರ್ಸ್ ಮತ್ತು ಗುಜ್ಜಾಲ್ ಟಾಕೀಸ್ ಅಡಿ ಸಿನಿಮಾ ನಿರ್ಮಾಣವಾಗುತ್ತದೆ ಎಂದು ಹೇಳಲಾಗಿತ್ತು. ಡಾಲಿ ಪಿಕ್ಚರ್ಸ್ ಬ್ಯಾನರ್‌ನಡಿ ಧನಂಜಯ ಬಂಡವಾಳ ಹೂಡಿದರೆ, ಗುಜ್ಜಾಲ್ ಟಾಕೀಸ್ ಬ್ಯಾನರ್‌ನಲ್ಲಿ ಗುಜ್ಜಾಲ್ ಪುರುಷೋತ್ತಮ್ ಹಣ ಹಾಕಿದ್ದರು. ಆದರೆ ಕೆಲ ಕಾರಣಗಳಿಗೆ ಗುಜ್ಜಾಲ್ ಈಗ ನಿರ್ಮಾಣದಿಂದ ಹೊರಹೋಗಿದ್ದಾರೆ. ಧನಂಜಯ ಒಬ್ಬರೇ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹಾಗಾಗಿ ನಿರ್ಮಾಪಕರ ಜಾಗದಲ್ಲಿ ಅವರ ತಾಯಿ ಸಾವಿತ್ರಮ್ಮ ಅವರ ಹೆಸರು ಬಂದಿದೆ.
ಮಧ್ಯಮ ವರ್ಗದ ಹುಡುಗನ ಕಥೆ ಇರುವ ಈ ಚಿತ್ರ ಕಂಪ್ಲೀಟ್ ಎಂಟರ್‌ಟೇನ್‌ಮೆಂಟ್ ಎಲಿಮೆಂಟ್ಸ್ ಇರುವ ಸಿನಿಮಾವಂತೆ. ಅಮೃತಾ ಅಯ್ಯಾಂಗರ್ ಈ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

Continue Reading