Movie Reviews
ಸಾರ್ವಜನಿಕರಿಗೆ ಇದು ನಿಜಕ್ಕೂ ಸುವರ್ಣಾವಕಾಶ -ಚಿತ್ರ ವಿಮರ್ಷೆ – ರೇಟಿಂಗ್ – 3.5/5
 
																								
												
												
											 
ಸಿನಿಮಾ: ಸಾರ್ವಜನಿಕರಿಗೆ ಸುವರ್ಣಾವಕಾಶ
ನಿರ್ದೇಶನ: ಅನೂಪ್ ರಾಮಸ್ವಾಮಿ ಕಶ್ಯಪ್
ನಿರ್ಮಾಣ: ದೇವರಾಜ್.ಆರ್, ಪ್ರಶಾಂತ್ ರೆಡ್ಡಿ, ಜನಾರ್ಧನ್ ಚಿಕ್ಕಣ್ಣ
ಕ್ಯಾಮೆರಾ: ವಿಘ್ನೇಶ್ ರಾಜ್
ಸಂಗೀತ: ಮಿಥುನ್ ಮುಕುಂದನ್
ತಾರಾಗಣ: ರಿಷಿ, ಧನ್ಯಾ ಬಾಲಕೃಷ್ಣ, ಸಿದ್ದು ಮೂಲಿಮನೆ, ದತ್ತಣ್ಣ, ರಂಗಾಯಣ ರಘು, ಮಿತ್ರ, ಶಾಲಿನಿ.
ರೇಟಿಂಗ್: 3.5/5.
ಸಾಮಾನ್ಯರ ಬದುಕಿನಲ್ಲಿ ನಡೆಯುವ ನೈಜ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದರೆ ಅದು ಜನರಿಗೆ ಹತ್ತಿರವಾಗುತ್ತದೆ. ಅಂತಹ ಹಲವು ದೃಶ್ಯಗಳನ್ನು ಪೋಣಿಸಿ ಸಾರ್ವಜನಿಕರಿಗೆ ಸುವರ್ಣಾವಕಾಶ ಸಿನಿಮಾವಾಗಿಸಿದ್ದಾರೆ ನಿರ್ದೇಶಕರು.
ಕಥಾನಾಯಕ ವೇದಾ [ರಿಷಿ] ಮತ್ತು ನಾಯಕಿ ಜಾನು[ಧನ್ಯ] ಇಬ್ಬರಿಗೂ ಸಾಮಾನ್ಯರ ಮನೆಯಲ್ಲಿ ಇರುವಂತಹ ಸಮಸ್ಯೆಗಳು ಎದುರಾಗುತ್ತವೆ. ಅವನ್ನು ಅವರಿಬ್ಬರೂ ಹೇಗೆ ಪರಿಹರಿಸಿಕೊಳ್ಳುತ್ತಾರೆ ಎಂಬುದೇ ಸಿನಿಮಾದ ಕಥೆ. ಈ ನಡುವೆ ನಡೆಯುವ ಅಷ್ಟು ದೃಶ್ಯಗಳು ಪ್ರೇಕ್ಷಕನನ್ನು ಎಂಟರ್ ಟೇನ್ ಮಾಡುತ್ತವೆ. ಸಮಸ್ಯೆಗಳ ನಡುವೆ ಅವರಿಬ್ಬರೂ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಬಗೆ, ಪಾಲಕರ ಪ್ರೀತಿ, ಹೀಗೆ ಸಾಕಷ್ಟು ವಿಚಾರಗಳು ಸಿನಿಮಾದಲ್ಲಿ ಬಂದು ಹೋಗುತ್ತವೆ. ಇದೇ ಸಾರ್ವಜನಿಕರಿಗೆ ಸುವರ್ಣಾವಕಾಶವಾಗಿದೆ. ಇದರಲ್ಲಿ ಯಾವುದೇ ಅಬ್ಬರ ಇಲ್ಲ, ಮಾಸ್ ಫೈಟ್ ಇಲ್ಲ ಆದರೂ ಚಿತ್ರದಲ್ಲಿ ಏನೋ ಇದೆ.
ನಾಯಕ ನಟ ರಿಷಿ ಫೈಟ್ , ಡಾನ್ಸ್ ಮಾಡುತ್ತಾರೆ, ಲವ್ ಮಾಡುತ್ತಾರೆ, ಜತಗೆ ಭಾವನಾತ್ಮಕವಾಗಿಯೂ ನಟಿಸಿದ್ದಾರೆ. ಈ ಎಲ್ಲ ಅಂಶಗಳ ಮೂಲಕ ಅವರ ಪ್ರೇಕ್ಷಕರ ಗಮನವನ್ನು ತನ್ನತ್ತ ಹಿಡಿದಿಡುತ್ತಾರೆ. ಧನ್ಯಾ ಬಾಲಕೃಷ್ಣಗೆ ಇದು ಕನ್ನಡದ ಮೊದಲ ಸಿನಿಮಾ ಆಗಿದ್ದರೂ, ಪರ್‌ಫೆಕ್ಟ್ ಆಗಿ ನಟಿಸಿದ್ದಾರೆ.
ದತ್ತಣ್ಣ, ಶಾಲಿನಿ, ರಂಗಾಯಣ ರಘು, ಮಿತ್ರ ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ.
ಸಿನಿಮಾದ ಫಸ್ಟ್ ಹಾಫ್‌ನಲ್ಲಿ ಅಂತಹ ಹೇಳಿಕೊಳ್ಳುವಂತಹ ಕಥೆ ಇಲ್ಲದೇ ಹೋದರೂ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಇನ್ನೊಂದಿಷ್ಟ ಎಫೆಕ್ಟೀವ್ ಆಗಿ ಮೂಡಿ ಬರಬೇಕಿತ್ತು ಎನಿಸುವಂತಹ ದೃಶ್ಯಗಳು ಸಹ ಇವೆ. ಆದರೂ ಒಮ್ಮೆ ಈ ಚಿತ್ರವನ್ನು ನೋಡಲು ಅಡ್ಡಿಯಿಲ್ಲ.
 
 
																	
																															 
			 
											 
											 
											 
											 
											 
											 
											 
											