Cinema News
ಮಹಾರಾಷ್ಟ್ರದ ಮರುಳುಗಾಡಿನಲ್ಲಿ ತ್ರಿವಿಕ್ರಮನ ಸಂಚಾರ
 
																								
												
												
											 
ತ್ರಿವಿಕ್ರಮ ಸದ್ಯ ಸ್ಯಾಂಡಲ್ವುಡ್ನಲ್ಲಿ ತೆರೆಗೆ ಬರೋ ಮುನ್ನವೆ ಸಾಕಷ್ಟು ವಿಶೇಷತೆಗಳೊಂದಿಗೆ ಸದ್ದು ಮಾಡ್ತಾ ಇರೋ ಸಿನಿಮಾ. ಹೇಳಿ ಕೇಳಿ ಇದು ಸ್ಯಾಂಡಲ್ವುಡ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ಅವರ ಚೊಚ್ಚಲ ಚಿತ್ರ ಈ ಕಾರಣಕ್ಕೆ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟಿಸಿತ್ತು. ಇದರ ಹೊರತಾಗಿಯೂ ಚಿತ್ರದ ಸ್ಟಾರ್ ಕಾಸ್ಟ್, ಸಾಹಸ ದೃಷ್ಯಗಳ ಶೂಟಿಂಗ್ ಸೇರಿದಂತೆ ಅನೇಕ ವಿಚಾರದಲ್ಲಿ ಚಿತ್ರೀಕರಣದ ಹಂತದಲ್ಲೇ ಚಿತ್ರ ರಸಿಕರಲ್ಲಿ ನಿರೀಕ್ಷೆಗಳ ಬೆಟ್ಟವನ್ನೆ ಕಟ್ಟುವಂತೆ ಮಾಡಿದೆ.
ಸಹನಾ ಮೂರ್ತಿ ನಿರ್ದೆಶನದಲ್ಲಿ ಮೂಡಿ ಬರ್ತಾ ಇರೋ ತ್ರಿವಿಕ್ರಮನ ಚಿತ್ರೀಕರಣ ಭರದಿಂದ ಸಾಗ್ತಾ ಇದೆ. ಬೆಂಗಳೂರು, ಉಡುಪಿ,ಕೊಡಚಾದ್ರಿ, ತೀರ್ಥಹಳ್ಳಿ, ಸಾಗರದ ಸುಂದರ ವಾತಾವರಣದಲ್ಲಿ ಮೂರನೇ ಹಂತದ ಶೂಟಿಂಗ್ ಮುಗಿಸಿ, ನಾಲ್ಕನೇ ಹಂತದ ಚಿತ್ರೀಕರಣಕ್ಕಾಗಿ ಮಹಾರಾಷ್ಟ್ರ ಹಾಗೂ ಜೋಧ್ಪುರದಲ್ಲಿ ಕಳೆದ 10 ದಿನಗಳಿಂದ ಚಿತ್ರತಂಡ ಬೀಡುಬಿಟ್ಟಿ ಭರ್ಜರಿ ಶೂಟಿಂಗ್ ನಡೆಸುತ್ತಿದೆ. ಮಹಾರಾಷ್ಟ್ರದ ಮರಳುಗಾಡು ಸೇರಿದಂತೆ ಸುಂದರ ತಾಣಗಳಲ್ಲಿ ಸಾಂಗ್ ಹಾಗೂ ಸಿನಿಮಾದ ಕೆಲ ಸನ್ನಿವೇಶಗಳ ಶೂಟಿಂಗ್ ನಡೆಸುತ್ತಿದೆ. ನಾಯಕ ವಿಕ್ರಂ , ಬಾಲಿವುಡ್ ನಟ ರೋಹಿತ್ ರಾಯ್, ಚಿತ್ರದ ನಟಿ ಆಕಾಂಕ್ಷ, ಸಾಧುಕೋಕಿಲ ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ಇನ್ನೂ ಹತ್ತು ದಿನಗಳ ಕಾಲ ಇಲ್ಲಿಯೇ ಶೂಟಿಂಗ್ ಮುಗಿಸಿ ನಂತರ ತ್ರಿವಿಕ್ರಮನ ಸಂಚಾರ ಕಾಶ್ಮೀರದತ್ತ ಸಾಗಲಿದೆ.

ಹೊಟ್ಟೆ ಹುಣ್ಣಾಗೋ ಹಾಗೇ ನಗಿಸಲಿದ್ದಾರೆ, ಸಾಧುಕೋಕಿಲ,ಚಿಕ್ಕಣ್ಣ
ತ್ರಿವಿಕ್ರಮ ಪಕ್ಕಾ ಲವ್ ಸ್ಟೋರಿ ಸಿನಿಮಾ ಇದರ ಜೊತೆಯಲ್ಲೇ ಸೆಂಟಿಮೆಂಟ್, ಎಮೋಷನ್ಸ್ ಹಾಗೂ ಗೆಳೆತನದ ಸುತ್ತಾ ಸಾಗುವ ಕಥೆಯಲ್ಲಿ, ನಿಮ್ಮನ್ನ ನಕ್ಕು ನಗಿಸಲು ಸ್ಯಾಂಡಲ್ವುಡ್ನ ದಿಗ್ಗಜ ಹಾಸ್ಯ ನಟರಾದ ಸಾಧುಕೋಕಿಲ ಹಾಗೂ ಯಂಗ್ ಅಂಡ್ ಎನರ್ಜಿಟಿಕ್ ಕಾಮಿಡಿ ಸ್ಟಾರ್ ಚಿಕ್ಕಣ ಇರಲಿದ್ದಾರೆ. ಚಿತ್ರದ ಮೊದಲ ಭಾಗದಲ್ಲಿ ಹಿರೋ ಜೊತೆ ಚಿಕ್ಕಣ್ಣ ಕಾಮಿಡಿ ಕಮಾಲ್ ಮಾಡಿದ್ರೆ ಎರಡನೇ ಭಾಗದಲ್ಲಿ ಸಾಧು ಕೋಕಿಲ ಕಾಮಿಡಿ ಮೋಡಿ ಮಾಡಲಿದ್ದಾರೆ. ಓಟ್ಟಾರೆ ತ್ರಿವಿಕ್ರಮ ಒಂದು ಕಂಪ್ಲೀಟ್ ಪ್ಯಾಕೇಜ್ ಮೂವಿಯಾಗಿದ್ದು ಮನೆ ಮಂದಿಯಲ್ಲ ಕೂತು ನೋಡಬಹುದಾದ ಸಿನಿಮಾ ಅನ್ನೋದು ಈಗಾಗಲೇ ಗೊತ್ತಾಗಿರೋ ವಿಚಾರ ಬಿಡಿ. ಇನ್ನು ತಮ್ಮ ಮಗನ ಮೊದಲ ಚಿತ್ರವನ್ನ ತೆರೆ ಮೇಲೆ ನೋಡಲು ರವಿಚಂದ್ರನ್ ಎಷ್ಟು ಕೂತುಹಲದಲ್ಲಿ ಇದ್ದಾರೋ, ಪ್ರೇಷಕರು ಕೂಡ ಅಷ್ಟೇ ಕುತುಹಲದಲ್ಲಿದ್ದಾರೆ ಅಂದ್ರು ತಪ್ಪಿಲ್ಲ ಯಾಕಂದ್ರೆ ಅಷ್ಟೇ ನಿರಿಕ್ಷೆಯನ್ನ ಹುಟ್ಟಿಸಿದೆ ಸಿನಿಮಾ.
 
 
																	
																															 
			 
											 
											 
											 
											 
											 
											 
											 
											