Cinema News
ಶಾನ್ವಿ ಜತೆ ಲವ್‌ನಲ್ಲಿ ಬಿದ್ರಾ ರಕ್ಷಿತ್ ಶೆಟ್ಟಿ!

ಅವನೇ ಶ್ರೀಮನ್ನಾರಾಯಣ ಸಿನಿಮಾದ ರಿಲೀಸ್ ಟೆನ್ಷನ್‌ನಲ್ಲಿರುವ ರಕ್ಷಿತ್ ಶೆಟ್ಟಿ ಮತ್ತೆ ಲವ್‌ನಲ್ಲಿ ಬಿದ್ದಿದ್ದಾರಂತೆ. ಅದು ಅವನೇ ಚಿತ್ರದ ನಾಯಕಿ ಶಾನ್ವಿ ಶ್ರಿವಾಸ್ತವ ಜತೆ.
ಇತ್ತೀಚೆಗೆ ಶಾನ್ವಿಯ ಹುಟ್ಟಹಬ್ಬದಂದು ರಕ್ಷಿತ್ ಡಿಫ್ರೆಂಟ್ ಆಗಿ ವಿಷ್ ಮಾಡಿದ್ದರು. ಅದನ್ನು ಕಂಡ ಅವರ ಅಭಿಮಾನಿಗಳು ನಿಮ್ಮಿಬ್ಬರದ್ದು ಒಳ್ಳೆ ಜೋಡಿ ಮದುವೆ ಯಾಕಾಗಬಾರದು ಎಂದು ಕಮೆಂಟ್ ಹಾಕಿದ್ದಾರೆ.
ಕಳೆದ ವರ್ಷ ರಶ್ಮಿಕಾ ಮಂದಣ್ಣ ಜತೆ ಮಾಡಿಕೊಂಡಿದ್ದ ಎಂಗೇಜ್‌ಮೆಂಟ್ ಬ್ರೇಕಪ್ ಆಗಿತ್ತು. ಹಾಗಾಗಿ ರಕ್ಷಿತ್ ಅಭಿಮಾನಿಗಳು ನೀವಿಬ್ಬರೂ ಮದುವೆ ಆಗಿ ಎಂದು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಮಾತನಾಡಿರುವ ರಕ್ಷಿತ್ ಇದೆಲ್ಲವೂ ಸುಳ್ಳು, ಸದ್ಯಕ್ಕೆ ನಾನು ಸಿನಿಮಾದಲ್ಲಿ ಬಿಝಿ ಇದ್ದೇನೆ ಎಂದಷ್ಟೇ ಹೇಳಿದ್ದಾರೆ ಅಲ್ಲದೆ ನನ್ನ ಅಭಿಮಾನಿಗಳು ಇಂತಹ ವಿಷಯಗಳನ್ನು ನಿರ್ಲಕ್ಷ್ಯ ಮಾಡಿ ಎಂತಲೂ ಹೇಳಿದ್ದಾರೆ.
S2
ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ ಹಾಗಾಗಿ ಇವರಿಬ್ಬರ ನಡುವೆ ಏನೋ ಇದೆ ಎನ್ನುವ ಸುದ್ದಿಗಳು ಸಹ ಹಬ್ಬಿವೆ.

Continue Reading