Connect with us

Cinema News

ರಾಮಾರ್ಜುನನಿಗೆ ಧನಿಯಾದ ಪುನೀತ್‌ರಾಜ್‌ಕುಮಾರ್

Published

on

ನಟ ಅನೀಶ್‌ ನಿರ್ದೇಶನ ಮಾಡುತ್ತಿರುವ ರಾಮಾರ್ಜುನ ಸಿನಿಮಾಗೆ ಪವರ್‌ ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ಹಾಡಿದ್ದಾರೆ. ಪುನೀತ್‌ ಹಾಡಿರುವ ಹಾಡಿನ ತುಣುಕು ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಸದ್ಯದಲ್ಲೇ ಪೂರ್ತಿ ಹಾಡು ರಿಲೀಸ್‌ ಆಗಲಿದೆಯಂತೆ.

ಈ ಹಿಂದೆ ಅನಿಶ್‌ ನಟಿಸಿದ್ದ ವಾಸು ನಾನ್‌ ಪಕ್ಕಾ ಕಮರ್ಷಿಯಲ್‌, ಅಕಿರ ಸಿನಿಮಾಗೆ ಪುನೀತ್‌ ಹಾಡಿದ್ದರು. ಈಗ ರಾಮಾರ್ಜುನಕ್ಕೂ ಹಾಡಿದ್ದಾರೆ. ಈ ಹಾಡನ್ನು ಅಕಿರ ಸಿನಿಮಾದ ನಿರ್ದೇಶಕ ನವೀನ್‌ ರೆಡ್ಡಿ ಹಾಡಿದ್ದಾರೆ. ಈ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ. ರಾಮಾರ್ಜುನ ಒಂದು ಏರಿಯಾದಲ್ಲಿ ನಡೆಯುವ ಕಥೆಯಾಗಿದ್ದು, ನಾಯಕ ಇನ್ಸುರೆನ್ಸ್‌ ಏಜೆಂಟ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಥೆಯಲ್ಲಿ ಒಂದು ಕೊಲೆಯಾಗುತ್ತದೆ, ಅದು ಯಾಕಾಯ್ತು, ಹೇಗೆ ಆಯ್ತು ಎಂಬುದೇ ಸಿನಿಮಾದ ಕಥೆ. ಇನ್ನು ಈ ಸಿನಿಮಾದಲ್ಲಿ ಫಸ್ಟ್‌ ಹಾಫ್‌ ಮತ್ತು ಸೆಕೆಂಡ್‌ ಹಾಫ್‌ಗೆ ಬೇರೆ ಬೇರೆ ಕಥೆಗಳಿದೆಯಂತೆ.

ಅನಿಶ್‌ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದು, ರಂಗಾಯಣ ರಘು, ಗಿರಿ, ಹರೀಶ್‌ ರಾಜ್‌ ಸೇಇದಂತೆ ದೊಡ್ಡ ತಾರಾಗಣವೆ ಚಿತ್ರದಲ್ಲಿದೆ.

Spread the love

Continue Reading