Cinema News
ಐ1 ಟ್ರೇಲರ್ ರಿಲೀಸ್ ಮಾಡ್ತಾರೆ ಕಿಚ್ಚ

ಟೆಂಪೋ ಟ್ರಾವೆಲರ್ (ಟಿಟಿ) ಒಳಗಡೆ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇರುವ ಐ 1 ಚಿತ್ರಕ್ಕೆ ಸುದೀಪ್ ಸಾಥ್ ನೀಡಿದ್ದು, ಅದರ ಟ್ರೇಲರ್‌ನ್ನು ಸೋಮವಾರ ರಿಲೀಸ್ ಮಾಡಲಿದ್ದಾರೆ. ಈಗಾಗಲೇ ಅದನ್ನು ಅವರು ಕನ್ಫರ್ಮ್ ಮಾಡಿದ್ದಾರೆ.
ಈ ಚಿತ್ರ ಈಗಾಗಲೇ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾಗಿದೆ. ನಾಲ್ಕು ಜನ ಯುವಕರು ಒಂದೇ ಕಡೆ ಸೇರಿದಾಗ ಅವರ ಮನಸ್ಥಿತಿಗಳು ಹೇಗಿರುತ್ತವೆ ಎಂಬುದರ ಅನಾವರಣವೂ ಈ ಚಿತ್ರದಲ್ಲಿದೆಯಂತೆ. ಈ ಮೂಲಕ ಸಮಾಜಕ್ಕೆ ಒಂದು ಸಂದೇಶವನ್ನು ಸಹ ನೀಡಿದ್ದಾರೆ.
ಒಂದು ಗಾಡಿಯೊಳಗೆ ಮೂವರು ಸಿಲುಕಿಕೊಳ್ಳುತ್ತಾರೆ, ಅಲ್ಲಿ ಸಿಲುಕಿ ಹಾಕಿಕೊಂಡು ಅವರು ಅನುಭವಿಸುವ ಕಷ್ಟವನ್ನು ಚಿತ್ರದಲ್ಲಿ ರಿವೀಲ್ ಮಾಡಲಾಗಿದೆ. ಜತೆಗೆ ಇವರನ್ನು ಟಿಟಿಯೊಳಗೆ ಯಾರು ಸಿಲುಕಿಸಿದರು, ಎಂಬುದನ್ನು ಚಿತ್ರದಲ್ಲಿಯೇ ನೋಡಬೇಕಂತೆ. ಇನ್ನು ಇದಕ್ಕಾಗಿ ಟಿಟಿಯನ್ನು ಸ್ಪೆಷಲ್ ಆಗಿ ರೆಡಿ ಮಾಡಲಾಗಿದೆ. ಈಗಾಗಲೇ ಟೀಸರ್ ರಿಲೀಸ್ ಆಗಿ ವೈರಲ್ ಆಗಿದೆ. ಇನ್ನು ಶೈಲಜಾ ಪ್ರಕಾಶ್ ಎಂಬ ಮಹಿಳೆ ಇದನ್ನು ನಿರ್ಮಾಣ ಮಾಡಿದ್ದಾರೆ.
ಹೊಸಬರಿಗೆ ಸುದೀಪ್ ಅವರಂಥಹ ಸ್ಟಾರ್ ನಟರು ಸಾಥ್ ನೀಡುತ್ತಿರುವುದು ನಮ್ಮ ಅದೃಷ್ಟ, ಇದಕ್ಕೆ ಸುದೀಪ್ ಅವರಿಗೆ ಧನ್ಯವಾದ ಹೇಳುತ್ತೇನೆ ಎನ್ನುತ್ತಾರೆ ನಿರ್ಮಾಪಕಿ ಶೈಲಜಾ ಪ್ರಕಾಶ್
