Cinema News
ನವೆಂಬರ್ 8 ಕ್ಕೆ ಮತ್ತೆ ತೆರೆಮೇಲೆ ಬರಲಿದ್ದಾರೆ ಕನ್ವರ್ ಲಾಲ್ ಅಂಬಿ
 
																								
												
												
											 
ಅಂಬರೀಷ್ ಅವರಿಗೆ ರೆಬೆಲ್ ಎಂಬ ಬಿರುದು ತಂದುಕೊಟ್ಟಿದ್ದ ಅಂತ ಸಿನಿಮಾ ನವೆಂಬರ್ 8ಕ್ಕೆ ರಿ ರೀಲೀಸ್ ಆಗುತ್ತಿದೆ.
1981ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಒಂದು ಟ್ರೆಂಡ್ ಸೆಟ್ ಮಾಡಿತ್ತು. ಎಸ್ ವಿ ರಾಜೇಂದ್ರ ಸಿಂಗ್ ಬಾಬು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಅಂಬರೀಷ್ ಅವರ ಹುಟ್ಟಿದ ಹಬ್ಬದ ದಿನ ಬಿಡುಗಡೆ ಮಾಡುವುದಾಗಿ ಅನೌನ್ಸ್ ಆಗಿದ್ದರೂ, ಸರಿಯಾದ ಪ್ಲಾನ್ ಇಲ್ಲದೆ ಆಗ ಬಿಡುಗಡೆಯಾಗಿರಲಿಲ್ಲ ಆದರೆ ಈಗ ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿ ರಿಲೀಸ್ ಡೇಟ್‌ನ್ನು ಅನೌನ್ಸ್ ಮಾಡಿದೆ.
ಈ ಸಿನಿಮಾದಲ್ಲಿ ಜ್ಯೂಲಿ ಲಕ್ಷ್ಮೀ ಮತ್ತು ಜಯಮಾಲ ನಟಿಸಿದ್ದಾರೆ. ಇದು ಈಗ ಹೊಸ ಸೌಂಡ್ ತಂತ್ರಜ್ಞಾನದೊಂದಿಗೆ ತಯಾರಾಗಿದ್ದು, ಅಭಿಮಾನಿಗಳಿಗೆ ಬೇರೆ ರೀತಿಯ ಫೀಲ್ ಕೊಡುತ್ತದೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಇದೇ 8ರಂದು ಅಂತವನ್ನು ಅಂಬಿ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು.
 
 
																	
																															
															Continue Reading
														
																																																																																																
															 
			 
											 
											 
											 
											 
											 
											 
											 
											