Cinema News
ಭರಾಟೆ ಮೂಲಕ ಹ್ಯಾಟ್ರಿಕ್ ಹೊಡಿತಾರ ಚೇತನ್??
 
																								
												
												
											 
ಭರ್ಜರಿ, ಬಹದ್ದೂರ್ ಮೂಲಕ ಚಿತ್ರರಸಿಕರಿಗೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಿರ್ದೇಶಕರಾಗಿರುವ ಚೇತನ್‌ಕುಮಾರ್ ಭರಾಟೆ ಮೂಲಕ ಹ್ಯಾಟ್ರಿಕ್ ಸಕ್ಸಸ್ ಕೊಡುತ್ತಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.
ಈಗಾಗಲೇ ಸಿನಿಮಾದ ಸ್ಟಿಲ್ಸ್ ಮತ್ತು ರಶಸ್ ನೋಡಿದ ಸಾಕಷ್ಟು ಮಂದಿ ಭರಾಟೆ ಸಹ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ. ಈ ಮೂಲಕ ಚೇತನ್ ಹ್ಯಾಟ್ರಿಕ್ ನಿರ್ದೇಶಕರಾಗುತ್ತಾರೆ ಎನ್ನುತ್ತಿದ್ದಾರೆ. ಶ್ರೀಮುರುಳಿ ಮತ್ತು ಶ್ರೀಲೀಲಾ ನಟನೆಯ ಈ ಸಿನಿಮಾ ಸೆಪ್ಟಂಬರ್‌ನಲ್ಲಿ ತೆರೆಗೆ ಬರಲಿದೆ.

ಸುಪ್ರಿತ್ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ತಾರಾ, ಸಾಯಿಕುಮಾರ್, ಅಯ್ಯಪ್ಪ, ರವಿಶಂಕರ್, ಗಿರಿ ಸೇರಿದಂತೆ ಸಾಕಷ್ಟು ಮಂದಿ ನಟಿಸುತ್ತಿದ್ದಾರೆ. ಈ ಸಿನಿಮಾದ ಒಟ್ಟು ಬಜೆಟ್ 10 ಕೋಟಿಯನ್ನು ಮೀರಿದ್ದು, ರಾಜಸ್ಥಾನ ಮೈಸೂರು, ಬೆಂಗಳೂರು ಹೀಗೆ ಸಾಕಷ್ಟು ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದ 2 ಹಾಡುಗಳನ್ನು ಚಿತ್ರಿಸಲು ಚಿತ್ರತಂಡ ಆಗಸ್ಟ್‌ನಲ್ಲಿ ವಿದೇಶಕ್ಕೆ ಹಾರಲಿದೆ.

ಸದ್ಯದಲ್ಲೇ ಆಡಿಯೋವನ್ನು ಬಿಡುಗಡೆ ಮಾಡಲಿರುವ ಚಿತ್ರತಂಡ ಅದರ ಜತೆಯಲ್ಲಿ ಸಿನಿಮಾದ ಟ್ರೇಲರ್‌ನ್ನು ರಿಲೀಸ್ ಮಾಡಲಿದೆಯಂತೆ. ಒಟ್ಟಿನಲ್ಲಿ ಭರಾಟೆ ಸಿನಿಮಾ ಚೇತನ್ ಪಾಲಿಗೆ ಹ್ಯಾಟ್ರಿಕ್ ಅಂತೂ ಆಗುತ್ತದೆ ಎನ್ನುತ್ತಿದ್ದಾರೆ ಸಿನಿ ಪಂಡಿತರು.
 
 
																	
																															 
			 
											 
											 
											 
											 
											 
											 
											 
											