Cinema News
‘ಆದಿ ಲಕ್ಷ್ಮಿ ಪುರಾಣ’ ಒಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ
 
																								
												
												
											 
ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ನಟಿಸಿರುವ ಆದಿ ಲಕ್ಷ್ಮೀ ಪುರಾಣ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಇದೊಂದು ರೊಮ್ಯಾಂಟಿಕ್ ಕಾಮಿಡಿ ಅನ್ನಿಸುತ್ತಿದೆ.
ಈ ಟ್ರೇಲರ್ ತುಂಬಾ ಕಾಮಿಡಿ ಡೈಲಾಗ್‌ಗಳೇ ಇದ್ದು, ನಿರೂಪ್ ಮತ್ತು ರಾಧಿಕಾ ಪಂಡಿತ್ ಈ ಸಿನಿಮಾ ಮೂಲಕ ರಂಜಿಸುವುದು ಗ್ಯಾರೆಂಟಿ ಅನ್ನುತ್ತಿದ್ದಾರೆ ಅಭಿಮಾನಿಗಳು.

ಈ ಟ್ರೇಲರ್‌ನ್ನು ನಟ ಯಶ್ ಬಿಡುಗಡೆ ಮಾಡಿ, ನನ್ನ ಪತ್ನಿಯ ಎಲ್ಲ ಕ್ರಿಯೇಟಿವ್ ಕೆಲಸಗಳಿಗೂ ನಾನು ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಹೇಳಿದರು. ಜತೆಗೆ ಆದಿ ಲಕ್ಷ್ಮೀ ಪುರಾಣ ಸಿನಿಮಾ ಅದ್ಭುತವಾಗಿದ್ದು, ನೋಡಿದ ಪ್ರತಿಯೊಬ್ಬರು ಎಂಜಾಯ್ ಮಾಡುತ್ತಾರೆ ಎಂದರು.

“ನಗರ ಪ್ರದೇಶದ ಯುವಜನತೆಯಲ್ಲಿ ಮಾದಕವಸ್ತುಗಳ ಚಟ ತೀವ್ರವಾಗಿದೆ. ಈ ಸಮಸ್ಯೆಯ ಬಗೆಗೆ ನಮ್ಮ ಚಿತ್ರದಲ್ಲಿ ಉತ್ತಮ ಸಂದೇಶವೊಂದನ್ನು ನೀಡಲಾಗಿದೆ” ನಿರ್ದೇಶಕಿ ಪ್ರಿಯಾ ಹೇಳಿದ್ದಾರೆ.
ಈ ಸಿನಿಮಾದಲ್ಲಿ ತಾರಾ, ಸುಚೇಂದ್ರ ಪ್ರಸಾದ್, ಜೊಸೈಮನ್, ವಿಶಾಲ್, ಯಶ್ ಶೆಟ್ಟಿ ಸೇರಿದಂತೆ ಸಾಕಷ್ಟು ಮಂದಿ ನಟಿಸಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಿರುವ ಈ ಸಿನಿಮಾ ಇದೇ ಶುಕ್ರವಾರ ತೆರೆಕಾಣುತ್ತಿದೆ.

 
 
																	
																															 
			 
											 
											 
											 
											 
											 
											 
											 
											