Connect with us

Cinema News

ಕಾಮಿಡಿ ಕಿಲಾಡಿ ಖ್ಯಾತಿಯ ಹರೀಶ್ ‘ಚಂದ್ರಹಾಸ’ನಾಗಿ; ಟ್ರೈಲರ್‌ಗೆ ಭರ್ಜರಿ ಮೆಚ್ಚುಗೆ

Published

on

ಕಾಮಿಡಿ ಕಿಲಾಡಿ ಖ್ಯಾತಿಯ ಹರೀಶ್ ನಾಯಕನಾಗಿ ನಟಿಸಿರುವ ‘ಚಂದ್ರಹಾಸ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಿನಿಮಾ ಕುರಿತ ಕುತೂಹಲ ಹೆಚ್ಚಿಸಿದೆ. ಡಾ. ರಾಜ್‌ಕುಮಾರ್ ಅಭಿನಯದ ‘ಚಂದ್ರಹಾಸ’ ಸಿನಿಮಾ ನೆನಪಾಗುವಂತೆ ಇದೇ ಹೆಸರಿನಲ್ಲಿ ಮೂಡಿಬಂದಿರುವ ಈ ಚಿತ್ರ ಇದೀಗ ತೆರೆಗೆ ಸಿದ್ಧವಾಗಿದೆ. ಆನಂದ್ ಕಲಕಬಂಡಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರಕ್ಕೆ ಬಸವಂತಗೌಡ ಪಾಟೀಲ್ ಅಮರಶ್ರೀ ಕಂಬೈನ್ಸ್ ಬ್ಯಾನರ್‌ನಡಿ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಹಾಡುಗಳ ಮೂಲಕ ಗಮನ ಸೆಳೆದಿರುವ ಚಿತ್ರ ಅಕ್ಟೋಬರ್ 23ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಬರಲಿದೆ. ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹುಲಿ ಕಾರ್ತಿಕ್, ನವಾಜ್ ಸೇರಿದಂತೆ ಹಲವು ಕಲಾವಿದರು ಚಿತ್ರತಂಡಕ್ಕೆ ಶುಭ ಹಾರೈಸಿದರು.

‘ಚಂದ್ರಹಾಸ’ ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಇವರಿಗೆ ಚಿತ್ರರಂಗ ಹೊಸದಲ್ಲ; ಬಹುತೇಕರು ರಂಗಭೂಮಿಯಲ್ಲಿ ಅನುಭವ ಹೊಂದಿರುವ ಕಲಾವಿದರು. ನಾಯಕ ಹರೀಶ್ ಹಿರಿಯೂರು ಕೂಡ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದು, ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಇದೀಗ ಇದೇ ಮೊದಲ ಬಾರಿಗೆ ನಾಯಕನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಚಂದ್ರ ಎಂಬ ಸ್ನೇಹಿತ ಜೀವನದಲ್ಲಿದ್ದರೆ ಬದುಕು ಹೇಗೆ ನಗು, ಖುಷಿ ಮತ್ತು ಭಾವನೆಗಳಿಂದ ತುಂಬಿರುತ್ತದೆ ಎಂಬುದನ್ನು ಕೇಂದ್ರವಾಗಿಟ್ಟುಕೊಂಡಿರುವ ಚಿತ್ರದಲ್ಲಿ ಕಾಮಿಡಿ ಜೊತೆಗೆ ಸ್ನೇಹ, ಭಾವನಾತ್ಮಕ ಅಂಶಗಳು ಹಾಗೂ ಮಧ್ಯಮ ವರ್ಗದ ಕುಟುಂಬಗಳ ಬದುಕಿನ ಸವಾಲುಗಳು ಬೆರೆತಿವೆ.

ಟ್ರೈಲರ್ ಬಿಡುಗಡೆ ವೇಳೆ ನಿರ್ದೇಶಕ ಆನಂದ್ ಕಲಕಬಂಡಿ ಮಾತನಾಡಿ, ‘ಚಂದ್ರಹಾಸ’ದ ಕಥೆ ಕೇವಲ ಕಲ್ಪನೆಯಿಂದ ಹುಟ್ಟಿದ್ದಲ್ಲ. ಸಿನಿಮಾದ ಹಲವು ಪಾತ್ರಗಳು ತಮ್ಮ ಜೀವನದಲ್ಲಿ ಕಂಡುಬಂದ ವ್ಯಕ್ತಿತ್ವಗಳಿಂದ ಪ್ರೇರಣೆ ಪಡೆದಿವೆ. ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತಹ ಹಲವು ಪಾತ್ರಗಳು ಚಿತ್ರದಲ್ಲಿದ್ದು, ಸಿನಿಮಾ ಎಲ್ಲರಿಗೂ ಇಷ್ಟವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನಾಯಕಿ ಛಾಯಾಶ್ರೀ ಉಮೇಶ್ ಅವರು ಶ್ರೀದೇವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪಾತ್ರದಲ್ಲಿ ಪಾಸಿಟಿವ್ ಗುಣಗಳೊಂದಿಗೆ ನೆಗೆಟಿವ್ ಶೇಡ್ ಕೂಡ ಇದೆ ಎಂದು ತಿಳಿಸಿದರು. ನಟನಾ ತಂಡದಿಂದ ಬಂದಿರುವ ತಮಗೆ ಮಂಡ್ಯ ರಮೇಶ್ ಗುರುಗಳು ಎಂದು ಅವರು ಹೇಳಿಕೊಂಡರು.

ನಾಯಕ ಹರೀಶ್ ಹಿರಿಯೂರು ಮಾತನಾಡಿ, ಚಿತ್ರತಂಡ ತಮ್ಮನ್ನು ‘ರಂಗರತ್ನ’ ಎಂಬ ಬಿರುದಿನೊಂದಿಗೆ ಗೌರವಿಸಿರುವುದು ವಿಶೇಷ ಸಂತಸ ತಂದಿದೆ ಎಂದರು. ರಂಗಭೂಮಿಯಿಂದ ಬಂದಿರುವ ಕಾರಣ ಈ ಗೌರವ ಮತ್ತಷ್ಟು ಖುಷಿ ನೀಡಿದೆ ಎಂದು ತಿಳಿಸಿದ ಅವರು, ಆರಂಭದಲ್ಲಿ ತಾನು ಕಾಮಿಡಿ ಪಾತ್ರಗಳಲ್ಲೇ ಮುಂದುವರಿಯಬೇಕು ಎಂದುಕೊಂಡಿದ್ದೆ, ಆದರೆ ನಿರ್ದೇಶಕರು ನಾಯಕನಾಗಿ ನಟಿಸುವಂತೆ ಕೇಳಿಕೊಂಡಾಗ ಈ ಸಿನಿಮಾ ಕೈಗೆತ್ತಿಕೊಂಡಿದ್ದಾಗಿ ಹೇಳಿದರು. ಬಸಣ್ಣ ಕಮತ್ತರ್ ಸಹ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ನಿಂಗರಾಜು ಮಂಡ್ಯ, ಸಂತೋಷ್ ಕೆರಿ, ಸೂರ್ಯಕಲ, ಜ್ಯೋತಿ ಮಂಗಳೂರು ಹಾಗೂ ಕಳಕಪ್ಪ ತಲವಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪೂರ್ಣಚಂದ್ರ ಸಂಗೀತ, ಚೇತನ್ ಶರ್ಮಾ ಛಾಯಾಗ್ರಹಣ ಹಾಗೂ ವಿ. ಗಿರೀಶ್ ಎಂ.ಸಿ. ಹಳ್ಳಿ ಸಂಕಲನ ಚಿತ್ರಕ್ಕಿದೆ.

Spread the love

Continue Reading