Connect with us

Cinema News

ಹೊಂಬಾಳೆ ಫಿಲ್ಮ್ಸ್ ‘ಹನುಮಾನ್ ಅಂಶ್’ ವಿದೇಶಿ ವಿತರಣೆಗೆ; ಸೆ.11ರಿಂದ ಜಾಗತಿಕ ಬಿಡುಗಡೆ

Published

on

ಭಾರತೀಯ ಕಥೆಗಳು, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಗುರುತಿಸಿಕೊಂಡಿರುವ ಕರ್ನಾಟಕದ ಹೆಮ್ಮೆಯ ಹೊಂಬಾಳೆ ಫಿಲ್ಮ್ಸ್ ಇದೀಗ ಭಕ್ತಿಪ್ರಧಾನ ಚಿತ್ರ ‘ಹನುಮಾನ್ ಅಂಶ್’ನ ವಿದೇಶಿ ವಿತರಣೆಯ ಹೊಣೆ ಹೊತ್ತಿದೆ. ಭಾರತದಲ್ಲಿ ಈಗಾಗಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಈ ಚಿತ್ರವು ಸೆಪ್ಟೆಂಬರ್ 11, 2026ರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗಳ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ವಿಶಾಲ್ ಚತುರ್ವೇದಿ ನಿರ್ದೇಶಿಸಿ, ಕಥೆ-ಚಿತ್ರಕಥೆ ಬರೆದಿರುವ ‘ಹನುಮಾನ್ ಅಂಶ್’ ಪ್ರಸಿದ್ಧ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ, ಮಹಾರಾಜ್-ಜೀ ಅವರ ಜೀವನ ಮತ್ತು ಆಧ್ಯಾತ್ಮಿಕ ಪಯಣವನ್ನು ಆಧರಿಸಿದೆ. ಪ್ರೀತಿ, ಭಕ್ತಿ, ಸೇವೆ ಹಾಗೂ ಮಾನವೀಯತೆಯ ಸಂದೇಶವನ್ನು ಸಾರಿದ ಮಹಾರಾಜ್-ಜೀ ಅವರ ಚಿಂತನೆಗಳು ಭಾರತವನ್ನು ಮೀರಿ ವಿಶ್ವದ ಹಲವು ಭಾಗಗಳ ಜನರನ್ನು ಪ್ರಭಾವಿಸಿವೆ. ವಿಶೇಷವಾಗಿ 1960 ಮತ್ತು 70ರ ದಶಕಗಳಲ್ಲಿ ಭಾರತಕ್ಕೆ ಬಂದ ಅನೇಕ ಪಾಶ್ಚಿಮಾತ್ಯ ಆಧ್ಯಾತ್ಮಿಕ ಅನ್ವೇಷಕರ ಮೇಲೂ ಅವರ ಪ್ರಭಾವ ಬೀರಿತ್ತು.

ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಉತ್ತಮವಾಗಿ ಮುನ್ನಡೆಯುತ್ತಿದ್ದು, ಬಿಡುಗಡೆಯ ಆರಂಭದಲ್ಲಿ ಸುಮಾರು ₹10 ಲಕ್ಷದ ಗಳಿಕೆಯಿಂದ ಶುರುವಾದ ಸಿನಿಮಾ 26ನೇ ದಿನಕ್ಕೆ ₹63.82 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಪ್ರೇಕ್ಷಕರಿಂದ ಸಿಕ್ಕಿರುವ ಸಕಾರಾತ್ಮಕ ಪ್ರತಿಕ್ರಿಯೆ ಹಾಗೂ ಬಲವಾದ ವರ್ಡ್ ಆಫ್ ಮೌತ್ ಚಿತ್ರದ ಗಳಿಕೆಗೆ ಮತ್ತಷ್ಟು ನೆರವಾಗಿದೆ. ಮಹಾರಾಜ್-ಜೀ ಅವರ ಪ್ರಭಾವಕ್ಕೆ ಸಂಬಂಧಿಸಿದಂತೆ ಜಾಗತಿಕವಾಗಿ ಪ್ರಸಿದ್ಧರಾದ ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್ ಮತ್ತು ಜೂಲಿಯಾ ರಾಬರ್ಟ್ಸ್ ಅವರ ಹೆಸರುಗಳೂ ಕೇಳಿಬರುತ್ತವೆ. ಸ್ಟೀವ್ ಜಾಬ್ಸ್ 1974ರಲ್ಲಿ ಆಧ್ಯಾತ್ಮಿಕ ಹುಡುಕಾಟದ ಹಿನ್ನೆಲೆಯಲ್ಲಿ ಭಾರತಕ್ಕೆ ಬಂದಿದ್ದರೆ, ಮಾರ್ಕ್ ಜುಕರ್‌ಬರ್ಗ್ ಭಾರತ ಪ್ರವಾಸದ ಸಂದರ್ಭದಲ್ಲಿ ಕೈಂಚಿ ಧಾಮ್‌ಗೆ ಭೇಟಿ ನೀಡಿದ್ದರು. ಜೂಲಿಯಾ ರಾಬರ್ಟ್ಸ್ ಕೂಡ ಮಹಾರಾಜ್-ಜೀ ಅವರ ಚಿತ್ರವು ತಮ್ಮ ಆಧ್ಯಾತ್ಮಿಕ ಪಯಣದ ಮೇಲೆ ಪ್ರಭಾವ ಬೀರಿದ್ದನ್ನು ಹಂಚಿಕೊಂಡಿದ್ದಾರೆ.

ಭಾರತದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸೇರಿದಂತೆ ಹಲವು ಗಣ್ಯರು ಕೈಂಚಿ ಧಾಮ್‌ಗೆ ಭೇಟಿ ನೀಡಿದ್ದಾರೆ. ಇದೀಗ ಕೈಂಚಿ ಧಾಮ್‌ನ ಆಧ್ಯಾತ್ಮಿಕ ಹಿನ್ನೆಲೆ ಮತ್ತು ಮಹಾರಾಜ್-ಜೀ ಅವರ ಜೀವನಕಥೆ ‘ಹನುಮಾನ್ ಅಂಶ್’ ಮೂಲಕ ಜಾಗತಿಕ ಪ್ರೇಕ್ಷಕರ ಮುಂದೆ ಬರಲಿದೆ. ಕರ್ನಾಟಕದ ಹೊಂಬಾಳೆ ಫಿಲ್ಮ್ಸ್‌ನ ವಿದೇಶಿ ವಿತರಣೆಯೊಂದಿಗೆ ಚಿತ್ರವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದೆ. ಹನುಮಾನ್ ಅಂಶ್’ ಸೆಪ್ಟೆಂಬರ್ 11, 2026ರಿಂದ ವಿಶ್ವದಾದ್ಯಂತ ಅಂತರರಾಷ್ಟ್ರೀಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Spread the love

Continue Reading