Cinema News
ಜೂನ್ 6ರಿಂದ ಕೆಜಿಎಫ್2 ಸೆಟ್‌ಗೆ ಯಶ್

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಕೆಜಿಎಫ್-2 ಈಗಾಗಲೇ ಶೂಟಿಂಗ್ ಆರಂಭಿಸಿದ್ದು, ಜೂನ್ 6 ರಿಂದ ಯಶ್ ಕೂಡಾ ಸೆಟ್‌ನ್ನು ಸೇರಿಕೊಳ್ಳಲಿದ್ದಾರೆ.
ಮೇ ತಿಂಗಳ ಆರಂಭದಿಂದಲೇ ಚಿತ್ರೀಕರಣ ಆರಂಭಿಸಿರುವ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಯಶ್ ಬಿಟ್ಟು ಉಳಿದ ಕಲಾವಿದರನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಸಂಗೀತ ಸಂಯೋಜನೆಯ ಕೆಲಸಗಳು ಸಹ ಭರದಿಂದ ಸಾಗುತ್ತಿವೆ.

ಕೆಜಿಎಫ್ ಚಾಪ್ಟರ್ 1 ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಕಮಾಲ್ ಮಾಡಿದ್ದು, 2018ರ ಸೂಪರ್ ಹಿಟ್ ಚಿತ್ರ ಎಂದು ಅನೌನ್ಸ್ ಆಗಿದೆ. ಹಾಗಾಗಿ ಚಾಪ್ಟರ್-2 ಮೇಲೆ ಅತಿ ಹೆಚ್ಚು ನಿರೀಕ್ಷೆ ಇದ್ದು, ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಕೆಜಿಎಫ್ ಚಾಪ್ಟರ್ -2ನಲ್ಲಿ ಬಾಲಿವುಡ್‌ನ ಸಂಜಯ್ ದತ್ ನಟಿಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.
ಒಟ್ಟಿನಲ್ಲಿ ಚಿತ್ರೀಕರಣದ ಸಮಯದಲ್ಲಿ ಇಷ್ಟೊಂದು ಸದ್ದು ಮಾಡುತ್ತಿರುವ ಕೆಜಿಎಫ್ ಚಾಪ್ಟರ್ -2 ಬಿಡುಗಡೆಯಾದ ಮೇಲೆ ಇನ್ನೆಷ್ಟು ಸದ್ದುಮಾಡಬಹುದು ಎಂಬುದು ಗಾಂಧಿನಗರದ ಮಾತಾಗಿದೆ.

Continue Reading