Cinema News
ಮತ್ತೆ ಕಾಲೇಜು ಹುಡುಗನಾದ ಪವರ್ ಸ್ಟಾರ್

ರಾಜಕುಮಾರದ ಯಶಸ್ವಿ ಜೋಡಿ ಸಂತೋಷ್ ಆನಂದ್‌ರಾಮ್ ಮತ್ತು ಪುನೀತ್‌ರಾಜ್‌ಕುಮಾರ್ ಯುವರತ್ನ ಮೂಲಕ ಮತ್ತೆ ಒಂದಾಗಿದ್ದು, ಈ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಜೋರಾಗಿದೆ.
ಈಗಾಗಲೇ ಎರಡನೇ ಶೆಡ್ಯೂಲ್ ಚಿತ್ರೀಕರಣ ಆರಂಭವಾಗಿದ್ದು, ಪುನೀತ್ ಅವರ ಕಾಲೇಜು ಭಾಗದ ಶೂಟಿಂಗ್ ನಡೆಯುತ್ತಿದೆ. ಇತ್ತೀಚೆಗೆ ಪುನೀತ್ ಅವರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಈ ಸಿನಿಮಾದಲ್ಲಿ ಪುನೀತ್‌ಗೆ ಜೋಡಿಯಾಗಿ ಸಯ್ಯೇಶಾ ನಟಿಸುತ್ತಿದ್ದಾರೆ.
ರಾಜಕುಮಾರದಂತೆ ಇದು ಕೂಡಾ ದೊಡ್ಡ ತಾರಾಗಣವನ್ನು ಹೊಂದಿದೆ. ಸುಮಾರು 100 ಕ್ಕೂ ಹೆಚ್ಚು ದಿನ ಈ ಚಿತ್ರದ ಶೂಟಿಂಗ್ ನಡೆಯಲಿದೆ.

Continue Reading