Cinema News
‘ಪೈಲ್ವಾನ್’ನ ಸರ್ಕಾರ್ ಸುನೀಲ್ ಶೆಟ್ಟಿ ಫರ್ಸ್ಟ್ ಲುಕ್ ವೈರಲ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಸುನೀಲ್ ಶೆಟ್ಟಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರ ಏನು ಎಂಬುದು ಯಾರಿಗೂ ಗೊತ್ತಾಗಿರಲಿಲ್ಲ, ಈಗ ಅದನ್ನು ಸ್ವತಃ ಕಿಚ್ಚ ಸುದೀಪ್ ಅವರೇ ರಿವೀಲ್ ಮಾಡಿದ್ದು, ಸುನೀಲ್ ಶೆಟ್ಟಿಯ ಪಾತ್ರದ ಹೆಸರು ಸರ್ಕಾರ್.
ಹೌದು, ಸುದೀಪ್ ತಮ್ಮ ಟ್ವೀಟರ್ ಅಕೌಂಟ್‌ನಲ್ಲಿ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದು, ಸುನೀಲ್ ಶೆಟ್ಟಿ ಲುಕ್ ಸಖತ್ ಆಗಿದೆ. ಸುನೀಲ್ ಶೆಟ್ಟಿ ಸರ್ಕಾರ್ ಎಂಬ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಸುದೀಪ್ ಟ್ವೀಟಿಸಿದ್ದಾರೆ. ಜತೆಗೆ ಸುನೀಲ್ ಶೆಟ್ಟಿ ಅಣ್ಣಾ ಅಂತಲೂ ಬರೆದುಕೊಂಡಿದ್ದಾರೆ.
ಸುನಿಲ್ ಶೆಟ್ಟಿ ಅವರ ಫರ್ಸ್ಟ್ ಲುಕ್ ಸೋಶಿಯಲ್ ಮೆದಿಯದಲ್ಲಿ ಟ್ರೆಂಡ್ ಆಗಿದೆ. ಬಾಲಿವುಡ್ ಮಂದಿ ಸೇರಿ ಬಹುತೇಕರು ಫರ್ಸ್ಟ್ ಲುಕ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಚಿತ್ರ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಲಿದೆ . ಹೆಬ್ಬುಲಿ ನಂತರ ಸುದೀಪ್ ಮತ್ತು ಸಿನಿಮಾಟೋಗ್ರಫರ್ ಕೃಷ್ಣ ಒಟ್ಟಾಗಿದ್ದು, ಪೈಲ್ವಾನ್ ಮೂಲಕ ಮೋಡಿ ಮಾಡಲಿದ್ದಾರೆ.
