Connect with us

Cinema News

ಥಿಯೇಟರ್ ಫುಲ್.. ಆಡಿಯನ್ಸ್ ಹ್ಯಾಪಿ.. ಲವ್ ಮ್ಯಾಟ್ರು ಸಿನಿಮಾದಿಂದ ಸಂತಸದ ನಿರ್ಧಾರ

Published

on

ಆಗಸ್ಟ್ ತಿಂಗಳು.. ಅರ್ಧ ವರ್ಷ ಮುಗಿದೇ ಹೋಗಿದೆ. ಆದರೆ ಸ್ವಲ್ಪ ಹಿಂದೆ ನೋಡಿದಾಗ ಅದ್ಯಾಕೋ ಏನೋ ಥಿಯೇಟರ್ ಗಳು ನಿರೀಕ್ಷಿತ ಮಟ್ಟಕ್ಕೆ ತುಂಬ್ತಾ ಇರ್ಲಿಲ್ಲ. ಆಗ ಎಲ್ಲಾ ಮಾತಾಡಿಕೊಂಡಿದ್ದು ಪ್ರೇಕ್ಷಕರ್ಯಾರು ಸಿನಿಮಾ ನೋಡೋದಕ್ಕೆ ಬರ್ತಿಲ್ಲ ಅನ್ನೋದು. ಇದು ನಿರ್ಮಾಪಕರ ಎನರ್ಜಿಯನ್ನು ಕುಂದುವಂತೆ ಮಾಡಿತ್ತು. ಆದರೆ ಬಂತು ನೋಡಿ ಸು ಫ್ರಂ ಸೋ ಸಿನಿಮಾ. ಥಿಯೇಟರ್ ಮಾಲೀಕರಿಗೆ ಹಬ್ಬ, ಜನಗಳಿಗೆ ನಕ್ಕು ನಲಿದು ಬಂದ ತೃಪ್ತಿ. ಹೀಗಾಗಿ ಒಳ್ಳೆ ಸಿನಿಮಾಗಳು ಬಂದರೆ ಜನ ಕೂಡ ಮೊಬೈಲ್ ಬಿಟ್ಟು ಬಿಗ್ ಸ್ಕ್ರೀನ್ ನಲ್ಲಿ ಸಿನಿಮಾ ನೋಡೋದಕ್ಕೆ ಬರ್ತಾರೆ ಅನ್ನೋದು ಪಕ್ಕಾ ಆಯ್ತು. ಜನರನ್ನ ಥಿಯೇಟರ್ ಗೆ ಕರೆಸುವಂತ ಕಂಟೆಂಟ್ ಇರೋ ಮತ್ತೊಂದು ಸಿನಿಮಾ ಕೂಡ ಇದೆ. ಅದೇ ಲವ್ ಮ್ಯಾಟ್ರು ಸಿನಿಮಾ.

ಈ ಸಿನಿಮಾ ಆಗಸ್ಟ್ 1ಕ್ಕೆ ತೆರೆಗೆ ಬರ್ತೇವೆ ಅಂತ ಅಧಿಕೃತವಾಗಿ ಡೇಟ್ ಅನೌನ್ಸ್ ಮಾಡಿತ್ತು. ಆದರೆ ಚಿತ್ರರಂಗ ಆಗಷ್ಟೇ ರಶ್ ಇದ್ಧದ್ದನ್ನ ಕಂಡು ಹಿಂದೆ ಸರಿಯುವ ನಿರ್ಧಾರ ಕೈಗೊಳ್ತು. ಹಠಕ್ಕೆ ಬಿದ್ದಿದ್ದರೆ ಒಂದಷ್ಟು ಥಿಯೇಟರ್ ಗಳು ಸಿಕ್ತಾ ಇದ್ದವು. ಲವ್ ಮ್ಯಾಟ್ರು ಹೀರೋ ಕಂ ಡೈರೆಕ್ಟರ್ ವಿರಾಟ್ ಬಿಲ್ವಗೆ ಅದು ಬೇಡವಾಗಿತ್ತು. ಥಿಯೇಟರ್ ತುಂಬಾ ಜನ ನೋಡೋ ಖುಷಿ ಅವರಿಗೂ ಇತ್ತು. ಹೀಗಾಗಿ ಆಗಸ್ಟ್ 22 ಕ್ಕೆ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಹಾಕಿಕೊಂಡರು.

SILVERHYTHM ಬ್ಯಾನರ್ ಮೂಲಕ ವಂದನಾ ಪ್ರಿಯ ನಿರ್ಮಾಣ ಮಾಡಿರುವ ಲವ್ ಮ್ಯಾಟ್ರು ಸಿನಿಮಾ ಆಗಸ್ಟ್ 1 ತಾರೀಕು ರಿಲೀಸ್ ಮಾಡ್ಬೇಕು ಅಂತ ಪ್ಲ್ಯಾನ್ ಮಾಡ್ಕೊಂಡಿದ್ದರು. ಈಗ ಮುಂದಕ್ಕೆ ಹೋಗಿದೆ. ಆ ಬಗ್ಗೆ ವಿರಾಟ ಬಿಲ್ವ ಹೇಳಿದ್ದು ಹೀಗೆ, ತುಂಬಾ ಪಾಸಿಟಿವ್ ಬೆಳವಣಿಗೆಗಳಿಂದ ಅಂದು ಸಿನಿಮಾವನ್ನು ರಿಲೀಸ್ ಮಾಡಲಿಲ್ಲ. ಆಗಸ್ಟ್ 1ರ ಬದಲಿಗೆ ಆಗಸ್ಟ್ 22ಕ್ಕೆ ಸಿನಿಮಾ ಬಿಡುಗಡೆ ಮಾಡ್ತಾ ಇದ್ದೇವೆ. ಒಂದು ನಿರ್ಧಾರ ತೆಗೆದುಕೊಂಡಾಗ ಅದರಲ್ಲಿ ಪ್ಲಸ್ ಅಂಡ್ ಮೈನಸ್ ಎರಡು ಪಾಯಿಂಟ್ ಅಡಗಿರುತ್ತೆ. ನಾವೂ ತುಂಬಾ ಅವಲಂಬಿತರಾಗಿರೋದು ಪಾಸಿಟಿವ್ ಯೋಚನೆಯ ಮೇಲೆ. ಒಂದು ಮಿಥ್ ಕ್ರಿಯೇಟ್ ಆಗಿತ್ತು. ಕನ್ನಡ ಚಿತ್ರಗಳನ್ನ ನೋಡೋದಕ್ಕೆ ಜನ ಬರ್ತಾ ಇಲ್ಲ ಅಂತ. ಆ ಸುಳ್ಳನ್ನ ಮುರಿದು ಹಾಕಿರೋದು ಸು ಫ್ರಂ ಸೋ ಸಿನಿಮಾ. ಒಂದು ಸಿನಿಮಾ ತುಂಬಾ ಚೆನ್ನಾಗಿ ಆಗ್ತಾ ಇದೆ ಅಂದಾಗ, ಅದರಲ್ಲೂ ನಮ್ಮ ಕನ್ನಡ ಸಿನಿಮಾ ಅದ್ಭುತವಾದ ರೆಸ್ಪಾನ್ಸ್ ಪಡೆಯುತ್ತಿದೆ ಎಂದಾಗ ನಾವೂ ಪೂರಕವಾಗಿ ನಿಂತುಕೊಳ್ಳಬೇಕು. ಹೀಗಾಗಿ ನಮ್ಮ ಸಿನಿಮಾವನ್ನು ಪೋಸ್ಟ್ ಪೋನ್ ಮಾಡಿದ್ದೇವೆ ಎಂದಿದ್ದಾರೆ.

ಹಾಗೇ ನಿರ್ಮಾಪಕರು ಯಾವತ್ತಿಗೂ ಬಿಸಿನೆಸ್ ಬಗ್ಗೆಯೂ ಯೋಚನೆ ಮಾಡ್ತಾರೆ. ಅದೇ ರೀತಿ ವಂದನಾ ಕೂಡ ಯೋಚನೆ ಮಾಡಿದ್ದು, ಬಿಸಿನೆಸ್ ಆಯಾಮ, ಇಂಡಸ್ಟ್ರಿಯ ಓವರ್ ಆಲ್ ಆಯಾಮ ನೋಡಿ ಒಂದು ನಿರ್ಧಾರಕ್ಕೆ ಬಂದೆವು. ತುಂಬಾ ತುಂಬಾ ನಂಬಿರೋದು ಕಂಟೆಂಟ್ ಕಿಂಗ್ ಅಂತ. ಅಟ್ ದಿ ಸೇಮ್ ಟೈಮ್ ಆಡಿಯನ್ಸ್ ಕೂಡ ಕಿಂಗ್. ಹೀಗಾಗಿ ಒಂದೊಳ್ಳೆ ಸಮಯ ಮಾಡಿಕೊಂಡು ಸಿನಿಮಾ ರಿಲೀಸ್ ಮಾಡ್ಬೇಕು ಅಂತ ಈ ನಿರ್ಧಾರ ತೆಗೆದುಕೊಂಡೆವು ಎಂದಿದ್ದಾರೆ ವಂದನಾ.

Spread the love

Continue Reading
Click to comment

Leave a Reply

Your email address will not be published. Required fields are marked *