Cinema News
ಈವಾರ ತೆರೆಗೆ 1 RAಬರಿ ಕಥೆ

ರಾಬರಿ, ಗೋಲ್ಡ್ ಸುತ್ತ ನಡೆಯುವ ಕಥಾಹಂದರ ಹೊಂದಿರುವ ಚಿತ್ರ”1 RAಬರಿ ಕಥೆ” ಈವಾರ ರಾಜ್ಯಾದ್ಯಂತ ತೆರೆಕಾಣಲಿದೆ. ರೊಮ್ಯಾಂಟಿಕ್, ಕಾಮಿಡಿ, ಆಕ್ಷನ್, ಸಸ್ಪೆನ್ಸ್- ಥ್ರಿಲ್ಲರ್ ಕಥೆಯಿರುವ ಈ ಚಿತ್ರಕ್ಕೆ ಗೋಪಾಲ್ ಹಳ್ಳೇರ್ ಹೊನ್ನಾವರ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಸಮನ್ವಿ ಕ್ರಿಯೇಷನ್ಸ್ ಬೇಲೂರು ಅಡಿಯಲ್ಲಿ ಸಂತೋಷ್ ನಾಗೇನಹಳ್ಳಿ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಪ್ರಕಾಶ್ ಜಿ. ಅವರ ಸಂಭಾಷಣೆ, ಗೋಪಾಲ್ ಹಳ್ಳೇರ್, ಪ್ರಕಾಶ್ ಅವರ ಸಾಹಿತ್ಯ, ಡಿರೆಂಟ್ ಡ್ಯಾನಿ ಅವರ ಸಾಹಸ, ಹರೀಶ್ ಜಿಂದೆ ಅವರ ಛಾಯಾಗ್ರಹಣ, ಸಂಜಿವರೆಡ್ಡಿ ಅವರ ಸಂಕಲನ, ಶ್ರೀವತ್ಸ ಅವರ ಸಂಗೀತ ಮತ್ತು ಚಾಮರಾಜ್, ರೋಹಿತ್ ಅರುಣ್ ಅವರ ನೃತ್ಯ ನಿರ್ದೇಶನವಿದೆ.

ಈ ಚಿತ್ರದಲ್ಲಿ ರಕ್ಕಂ ಖ್ಯಾತಿಯ ರಣಧೀರ್ ಗೌಡ, ರಿಷ್ವಿಭಟ್, ಸುಂದರ್ ರಾಜ್, ಕರಿಸುಬ್ಬು, ಕಡ್ಡಿಪುಡಿ ಚಂದ್ರು, ಶಿವರಾಜ್ ಕೆ.ಆರ್. ಪೇಟೆ, ತಬಲಾನಾಣಿ,ನಿರ್ಮಾಪಕ ಸಂತೋಷ್ ಅವರೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಹಾಂಗೀರ್, ಸಂಪತ್ ಮೈತ್ರೇಯ, ಗಿರೀಶ್ ಶಿವಣ್ಣ, ಮೂಗ್ ಸುರೇಶ್, ಎಂ.ಕೆ. ಮಠ್, ನವೀನ್ ಪಡೀಲ್, ಸಂಜು ಬಸಯ್ಯ ತಾರಾಗಣದಲ್ಲಿದ್ದಾರೆ.

