Cinema News
ಮೈಸೂರಿನಲ್ಲಿ ಅಶ್ವತ್ಥ್ ಮನೆಗೆ ಭೇಟಿ ನೀಡಿದ ಪುನೀತ್ ರಾಜಕುಮಾರ್

ಪುನೀತ್ ನಟಿಸುತ್ತಿರುವ ಯುವರತ್ನ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಹಾಗಾಗಿ ಪುನೀತ್ ಮೈಸೂರಿನಲ್ಲಿರುವ ಹಿರಿಯ ನಟ ದಿವಂಗತ ಅಶ್ವತ್ಥ್ ಮನೆಗೆ ಭೇಟಿ ನೀಡಿದ್ದಾರೆ.
ಮೈಸೂರಿನ ಸರಸ್ವತಿ ಪುರಂನಲ್ಲಿನ ಅಶ್ವತ್ಥ್ ಮನೆಯ್ಲಲಿ ಈಗ ಅವರ ಪುತ್ರ ನಟ ಶಂಕರ್ ಅಶ್ವಥ್ ವಾಸವಾಗಿದ್ದಾರೆ. ಆ ಮನೆಗೆ ಇಂದು ಬೆಳಗ್ಗೆ ಪುನೀತ್ ಹೋಗಿದ್ದು, ಅವರ ಮೆನೆಯಲ್ಲಿಯೇ ಉಪ್ಪಿಟ್ಟು ಕೇಸರಿಬಾತ್ ತಿಂದಿದ್ದಾರೆ.

ಶೂಟಿಂಗ್ ಸೆಟ್ಟಿಗೆ ಹೋಗಿದ್ದ ಶಂಕರ್ ಅಶ್ವಥ್, ಪುನೀತ್ ಅವರನ್ನು ಮನೆಗೆ ಬರುವಂತೆ ಮನವಿ ಮಾಡಿಕೊಂಡಿದ್ದರು. ಹಾಗಾಗಿ ಪುನೀತ್ ಶಂಕರ್ ಅಶ್ವಥ್ ಮನೆಗೆ ಭೇಟಿ ನೀಡಿದ್ದರು. ಆಗ ನಟ ಅಶ್ವತ್ಥ್ ಅವರ ಪತ್ನಿ ಶಾರದಮ್ಮ ಅವರನ್ನು ಮಾತನಾಡಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ.

Continue Reading