Connect with us

Cinema News

ನಟ ಸುಶಾಂತ್ ಜೊತೆಗಿನ ಒಪ್ಪಂದ ಪ್ರತಿಗಳನ್ನು ಪೊಲೀಸರಿಗೆ ತಲುಪಿಸಿದ ಯಶ್ ರಾಜ್ ಫಿಲ್ಮ್ಸ್

Published

on

ಯಶ್ ರಾಜ್ ಫಿಲ್ಮ್ಸ್ (ವೈಆರ್ ಎಫ್) ಜೂ.20 ರಂದು, ಮೃತ ನಟ ಸುಶಾಂತ್ ಸಿಂಗ್ ಜೊತೆಗಿನ ಮುಂದಿನ ಚಿತ್ರಗಳಿಗಾಗಿ ನಡೆದಿದ್ದ ತನ್ನ ಒಪ್ಪಂದದ ಪ್ರತಿಗಳನ್ನು ಮುಂಬೈ ಪೊಲೀಸರಿಗೆ ತಲುಪಿಸಿದೆ.

ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳದಲ್ಲಿ ಯಾವುದೇ ಪತ್ರ ದೊರೆತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈ ಬಳಿಕ ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು, ಸಿನಿಮಾ ಒಪ್ಪಂದದ ಕುರಿತು ಮಾಹಿತಿ ಹಂಚಿಕೊಳ್ಳುವಂತೆ ಯಶ್ ರಾಜ್ ಫಿಲ್ಮ್ಸ್ ಗೆ ಜೂ.18 ರಂದು ಸೂಚನೆ ನೀಡಿದ್ದರು.

ತನಿಖಾಧಿಕಾರಿಗೆ ಸುಶಾಂತ್ ಸಿಂಗ್ ರಜಪೂತ್ ಸಹಿ ಮಾಡಿರುವ ಒಪ್ಪಂದದ ಪತ್ರ YRF (Yash Raj Films) ನಿಂದ ಲಭ್ಯವಾಗಿದೆ ಎಂದು ಅಭಿಷೇಕ್ ತ್ರಿಮುಖೆ, ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ತಿಳಿಸಿದ್ದಾರೆ. ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಸುಶಾಂತ್ ಕುಟುಂಬ ಸದಸ್ಯರು, ಸುಶಾಂತ್ ನ ಆಪ್ತ ಗೆಳತಿ ರೆಹಾ ಚಕ್ರವರ್ತಿ, ಕಾಸ್ಟಿಂಗ್ ಡೈರೆಕ್ಟರ್ ಮುಖೇಶ್ ಛಬ್ರಾ ಸೇರಿದಂತೆ ಈ ವರೆಗೂ 15 ಜನರನ್ನು ವಿಚಾರಣೆಗೊಳಪಡಿಸಿದ್ದಾರೆ. ಅವರು ನೀಡಿರುವ ಮಾಹಿತಿಯ ಆಧಾರದಲ್ಲಿ ವಾಸ್ತವಾಂಶಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಡಿಸಿಪಿ ಹೇಳಿದ್ದಾರೆ.

ರೆಹಾ ಚಕ್ರವರ್ತಿ ನೀಡಿರುವ ಮಾಹಿತಿಯ ಪ್ರಕಾರ, ಯಶ್ ರಾಜ್ ಫಿಲ್ಮ್ಸ್ ಜೊತೆಗೆ ನಟ ಸುಶಾಂತ್ ಒಪ್ಪಂದಗಳನ್ನು ರದ್ದುಪಡಿಸಿ ಆಕೆಗೂ ಯಶ್ ರಾಜ್ ಬ್ಯಾನರ್ ನಡಿಯಲ್ಲಿ ಕೆಲಸ ಮಾಡದಂತೆ ಹೇಳಿದ್ದರು ಎಂದು ತಿಳಿದುಬಂದಿದೆ.

34 ವರ್ಷದ ನಟ ಸುಶಾಂತ್ ಸಿಂಗ್ ರಜಪೂತ್ ಕಳೆದ ಭಾನುವಾರ ಬಾಂದ್ರದಲ್ಲಿರುವ ತಮ್ಮ ಅಪಾರ್ಟ್ಮೆಂಟ್ ನಲ್ಲಿ ನೇಣಿಗೆ ಶರಣಾಗಿದ್ದರು.

Source : New Indian Express

Spread the love

Continue Reading
Click to comment

Leave a Reply

Your email address will not be published. Required fields are marked *