Cinema News
ವಿದೇಶದಲ್ಲಿಯೇ 1200 ಸ್ಕ್ರೀನ್ ಗಳಲ್ಲಿ ‘ವಿಕ್ರಾಂತ್ ರೋಣ’ನ ಅಬ್ಬರ

ಸ್ಯಾಂಡಲ್ ವುಡ್ ನಲ್ಲಿ ಸದ್ಯದ ಮಟ್ಟಿಗೆ ಸಾಕಷ್ಟು ನಿರೀಕ್ಷೆ ಮೂಡಿಸಿರೋ ಸಿನಿಮಾ ವಿಕ್ರಾಂತ್ ರೋಣ. ಈಗಾಗ್ಲೆ ಚಿತ್ರದ ಹಾಡು ಹಾಗೂ ಟ್ರೈಲರ್ ಗಳನ್ನ ನೋಡಿರೋ ಅಭಿಮಾನಿಗಳು ಸಿನಿಮಾ ನೋಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ 3 ಡಿಯಲ್ಲಿ ಜುಲೈ 28ರಂದು ಬಿಡುಗಡೆಗೆ ಸಜ್ಜಾಗಿದ್ದು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡೋಕೆ ಚಿತ್ರತಂಡ ಮುಂದಾಗಿದೆ.
ಅನೂಪ್ ಭಂಡಾರಿ ನಿರ್ದೇಶನದ, ಶಾಲಿನಿ ಆರ್ಟ್ಸ್ ನಿರ್ಮಾಣದ ವಿಕ್ರಾಂತ್ ರೋಣ ಸಿನಿಮಾ ದೇಶ ವಿದೇಶದಲ್ಲೂ ತೆರೆಗೆ ಬರ್ತಿದೆ. ವಿದೇಶದಲ್ಲಿಯೇ ಸುಮಾರು 1200 ಸ್ಕ್ರೀನ್ ಗಳಲ್ಲಿ ವಿಕ್ರಾಂತ್ ರೋಣ ಅಬ್ಬರಿಸಲಿದೆ.

ಯುಕೆ. ಯುಎಸ್, ಯುರೋಪ್, ಕೆನಡಾ, ಆಸ್ಟ್ರೇಲಿಯಾ, ಮಲೇಷಿಯಾ, ಸಿಂಗಾಪುರ್, ನೇಪಾಳ, ಗಲ್ಫ್ ರಾಷ್ಟ್ರಗಳಲ್ಲಿ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ಆಗಲಿದೆ. ಕಳೆದ ಮೂರು ತಿಂಗಳಿನಿಂದ ಸಿನಿಮಾ ರಿಲೀಸ್ ಮಾಡೋಕೆ ವಿದೇಶದಲ್ಲಿ ಪ್ಲಾನ್ ಮಾಡಿಕೊಳ್ಳಲಾಗಿದೆ. ಇವುಗಳ ಜೊತೆ ಇನ್ನೂ ಕೆಲ ರಾಷ್ಟ್ರಗಳಲ್ಲಿ ಸಿನಿಮಾ ರಿಲೀಸ್ ಮಾಡೋಕೆ ವಿಕ್ರಾಂತ್ ರೋಣ ತಂಡ ಮುಂದಾಗಿದೆ.
ಮೊದಲು ಕನ್ನಡ, ಹಿಂದಿ, ಇಂಗ್ಲೀಷ್, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ವಿಕ್ರಾಂತ್ ರೋಣ ಬಿಡುಗಡೆಯಾಗಲಿದೆ. ಆ ಬಳಿಕ ಅರಬಿಕ್, ಜರ್ಮನಿ, ರಷ್ಯಾ, ಮ್ಯಾಂಡರಿನ್ ಭಾಷೆಗಳಲ್ಲೂ ಸಿನಿಮಾ ಬಿಡುಗಡೆ ಮಾಡೋ ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ.
