Cinema News
50 ನೇ ಚಿತ್ರ ನಿರ್ದೇಶನ ಮಾಡ್ತಾರೆ ರಿಯಲ್ ಸ್ಟಾರ್ ಉಪ್ಪಿ
ತಾವೇ ಸಿನಿಮಾವನ್ನು ನಿರ್ದೇಶನ ಮಾಡುವುದಾಗಿ ಉಪೇಂದ್ರ ಇತ್ತೀಚೆಗೆ ಅನೌನ್ಸ್ ಮಾಡಿದ್ದರು. ಈಗ ಅವರ 50 ನೇ ಚಿತ್ರವನ್ನು ಮಾಡುತ್ತೇನೆ ಎಂದು ಮೊನ್ನೆ ಪತ್ರಕರ್ತರ ಬಳಿ ಹೇಳಿಕೊಂಡಿದ್ದಾರೆ.
ಉಪ್ಪಿ ನಟನೆಗಿಂತಲೂ ನಿರ್ದೇಶನಕ್ಕೆ ಫೇಮಸ್, ನಿರ್ದೇಶನ ಮಾಡಿದ್ದು ಕೆಲವೇ ಕೆಲವು ಸಿನಿಮಾಗಳಾದರೂ, ಅದರಲ್ಲಿ ಸ್ಪೆಷಾಲಿಟಿ ಇರುತ್ತದೆ. ಉಪ್ಪಿ ನಿರ್ದೇಶನ ಮಾಡುತ್ತಿದ್ದಾರೆ ಎಂದರೆ ಆ ಸಿನಿಮಾ ಕಥೆ, ನಿರೂಪಣೆ ಎಲ್ಲದರಲ್ಲಿಯೂ ಅದರದ್ದೇ ಆದ ವಿಶೇಷತೆಗಳಿರುತ್ತದೆ. ಹಾಗಾಗಿ ಈ ಬಾರಿ ತಮ್ಮ 50 ನೇ ಚಿತ್ರವನ್ನು ತಾವೆ ನಿರ್ದೇಶನ ಮಾಡಲಿದ್ದಾರಂತೆ. ಇದನ್ನು ಕಂಡ ಅಭಿಮಾನಿಗಳು ನಮ್ಮ ಬಾಸ್ ಮತ್ತೊಮ್ಮೆ ಸೂಪರ್‌ನಂತಹ ಸಿನಿಮಾವನ್ನು ನಿರ್ದೇಶನ ಮಾಡಲಿ ಎನ್ನುತ್ತಿದ್ದಾರೆ.
ಇತ್ತ ಉಪೇಂದ್ರ ಅಭಿನಯದ “ಐ ಲವ್ ಯು” ಚಿತ್ರ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಜೂನ್ 14 ರಂದು ತೆರೆಕಾಣಲಿದೆ.