Connect with us

Cinema News

‘Trying to Save the World’ ಮೂಲಕ ಸಮಾಜಕ್ಕೆ ಹೊಸ ಸಂದೇಶ; ನಹೇಶ್ ಪೊಳ್ ಮಹತ್ವಾಕಾಂಕ್ಷೆಯ ಸಿನಿಮಾ

Published

on

ಮೈಸೂರು ಮೂಲದ ಆಟೋಮೊಬೈಲ್ ಇಂಜಿನಿಯರ್ ನಹೇಶ್ ಪೊಳ್ ತಮ್ಮ ಮೂರನೇ ಸಿನಿಮಾ ‘Trying to Save the World’ ಮೂಲಕ ಮತ್ತೊಂದು ವಿಭಿನ್ನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಜೊತೆಗೆ ರ‍್ಯಾಡಿಕಲ್ ಕಾನ್ಸೆಪ್ಟ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ನಿರ್ಮಾಣದ ಹೊಣೆಗಾರಿಕೆಯನ್ನೂ ಅವರು ವಹಿಸಿಕೊಂಡಿದ್ದಾರೆ. ಚಿತ್ರದ ಮೊದಲ ಹಂತದ ಪ್ರಚಾರವಾಗಿ ಎಸ್.ಇ.ಎ. ಕಾಲೇಜ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಸಿನಿಮಾದ ಪರಿಕಲ್ಪನೆಯನ್ನು ಪ್ರತಿಬಿಂಬಿಸುವ ವಿಶೇಷ ಮಾದರಿಯನ್ನು ಮಾಧ್ಯಮದ ಮುಂದೆ ಅನಾವರಣಗೊಳಿಸಿದರು. ಈ ವೇಳೆ ಕಾಲೇಜಿನ ಜಂಟಿ ಕಾರ್ಯದರ್ಶಿ ಕೆ. ಅನುಪಮ ಹಾಗೂ ವಿಭಾಗದ ಮುಖ್ಯಸ್ಥ ಪಿ.ಆರ್. ಕೃಷ್ಣಕುಮಾರ್ ಚಿತ್ರದ ಪ್ರಯತ್ನಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಹೇಶ್ ಪೊಳ್, ಚಿತ್ರದಲ್ಲಿ ಸತ್ಯಯುಗದ ಪರಿಕಲ್ಪನೆಯೊಂದಿಗೆ ರಸ್ತೆ ಅಭಿವೃದ್ಧಿ ಕುರಿತ ವಿಶೇಷ ಕಥಾಹಂದರವಿದೆ ಎಂದು ಹೇಳಿದರು. ಇಂಜಿನಿಯರಿಂಗ್ ವಿದ್ಯಾರ್ಥಿಗಳ ನಡುವೆ ನಡೆಯುವ ಸ್ಪರ್ಧೆಯ ಸುತ್ತ ಕಥೆ ಸಾಗಲಿದ್ದು, ಅದರಲ್ಲಿ ತಾವೂ ಒಬ್ಬ ವಿದ್ಯಾರ್ಥಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಆರಂಭಿಸಿದ ಈ ಕನಸಿನ ಯೋಜನೆ ಈಗ ಸಾಕಾರಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.

ಪ್ರಸ್ತುತ ರಸ್ತೆ ವ್ಯವಸ್ಥೆ, ತೆರಿಗೆ, ಟೋಲ್ ಶುಲ್ಕ ಹಾಗೂ ಇಂಧನ ವೆಚ್ಚಗಳಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಚಿತ್ರದಲ್ಲಿ ಪ್ರಸ್ತಾಪಿಸಲಾಗುತ್ತದೆ. ಉತ್ತಮ ರಸ್ತೆ ನಿರ್ಮಾಣಕ್ಕೆ ಹೊಸ ಆಲೋಚನೆಗಳನ್ನು ಸಮಾಜದ ಮುಂದೆ ಇಡುವ ಜೊತೆಗೆ, ಜನರ ಹಣವನ್ನು ಹೇಗೆ ಉಳಿಸಬಹುದು ಎಂಬ ಸಂದೇಶವನ್ನೂ ಮನರಂಜನೆಯ ಮೂಲಕ ತಲುಪಿಸುವ ಉದ್ದೇಶ ಚಿತ್ರಕ್ಕಿದೆ ಎಂದು ನಿರ್ದೇಶಕರು ವಿವರಿಸಿದರು.

ಈ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರಲು ಪ್ರತಿಭಾವಂತ ಹಾಗೂ ಆಸಕ್ತಿ ಹೊಂದಿರುವ ಇಂಜಿನಿಯರ್‌ಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ವಿಶೇಷ ಸ್ಪರ್ಧೆಯನ್ನೂ ಆಯೋಜಿಸಲಾಗುತ್ತಿದೆ. ಈ ಸ್ಪರ್ಧೆ ಚಿತ್ರದ ಕ್ಲೈಮಾಕ್ಸ್‌ನ ಪ್ರಮುಖ ಭಾಗವಾಗಿದ್ದು, ಸಾಮಾಜಿಕ ಕಾಳಜಿಯೊಂದಿಗೆ ರೂಪುಗೊಳ್ಳುತ್ತಿರುವ ‘Trying to Save the World’ ಸಿನಿಮಾ ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ

Spread the love

Continue Reading