Connect with us

Cinema News

ಟ್ರೆಂಡ್ ಸೆಟ್ಟರ್ ಆದ ಶುಗರ್‌ಲೆಸ್ ಟ್ರೈಲರ್

Published

on

ಸಕ್ಕರೆ ಖಾಯಿಲೆ ಇರುವ ಯುವಕನೊಬ್ಬನ ಮನಸಿನ ತಳಮಳಗಳು, ಹೊಯ್ದಾಟಗಳು, ತನಗೆ ಶುಗರ್ ಇದೆ ಎಂದು ತಿಳಿದಾಗ ಆತ ಪರಿತಪಿಸುವ ರೀತಿ, ಅಲ್ಲದೆ ಸಕ್ಕರೆ ಖಾಯಿಲೆ ಇದ್ದರೂ ಸಹ ಯಾವರೀತಿ ಸುಖಮಯ ಜೀವನ ನಡೆಸಬಹುದು ಎಂಬುದನ್ನು ನಿರ್ದೇಶಕ ಕೆ.ಎಂ.ಶಶಿಧರ್ ಅವರು ತಮ್ಮ ಪ್ರಥಮ ನಿರ್ದೇನದ ‘ಶುಗರ್‌ಲೆಸ್’ ಚಿತ್ರದ ಮೂಲಕ ಹೇಳಗೊರಟಿದ್ದಾರೆ. ಜುಲೈ ೮ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು, ಫಿಲಂ ಚೇಂಬರ್ ಅಧ್ಯಕ್ಷ ಬಾಮ ಹರೀಶ್, ಶ್ರೀನಗರ ಕಿಟ್ಟಿ, ಶಿಶ್ಯದೀಪಕ್, ಮಠ ಗುರುಪ್ರಸಾದ್, ರಘು ಸಿಂಗಂ, ಚಿತ್ರದ ವಿತರಕಿ ಮಾಲಿನಿ ಅಲ್ಲದೆ ಬ್ಲಾಕ್ ಪ್ಯಾಂಥರ್ ಮೂವೀಸ್‌ನ ಮುಖ್ಯಸ್ಥರು ಕೂಡ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

ನಿರ್ಮಾಪಕರಾಗಿದ್ದ ಶಶಿಧರ ಕೆ.ಎಂ. ಅವರು ಇದೇ ಮೊದಲಬಾರಿಗೆ ನಿರ್ದೇಶನ ಮಾಡಿರುವ ಶುಗರ್ ಲೆಸ್ ಚಿತ್ರದ ಟ್ರೈಲರ್‌ನಲ್ಲಿ ಚಿತ್ರದ ಒಂದಷ್ಟು ಕಂಟೆಂಟ್ ಬಿಟ್ಟುಕೊಡಲಾಗಿದೆ,
ಮೊದಲಿಗೆ ಹಿರಿಯನಟ ದತ್ತಣ್ಣ ಮಾತನಾಡಿ ನಾವು ಮಾಡಿದ್ದನ್ನು ನಾವೇ ಹೇಳುವುದಕ್ಕಿಂತ ನೋಡಿದವರು ಹೇಳಿದರೇ ಚೆನ್ನಾಗಿರುತ್ತೆ. ನಿರ್ದೇಶಕರು ಮೊದಲಬಾರಿಗೆ ಡೈರೆಕ್ಷನ್ ಮಾಡಿದರೂ ಎಲ್ಲೂಸಹ ಎಡವಿಲ್ಲ, ಸಮಾಜಕ್ಕೊಂದು ಒಳ್ಳೇ ಮೆಸೇಜ್ ಈ ಚಿತ್ರದಲ್ಲಿದೆ. ಸಕ್ಕರೆ ಖಾಯಿಲೆ ಇರುವವರೂ ಸಹ ಉತ್ತಮ ಜೀವನವನ್ನು ಹೇಗೆ ರೂಪಿಸಿಕೊಳ್ಳಬಹುದು ಎಂಬುದನ್ನು ಈ ಚಿತ್ರದಲ್ಲಿ ತುಂಬಾ ಚೆನ್ನಾಗಿ ತೋರಿಸಿದ್ದಾರೆ ಎಂದು ಹೇಳಿದರು. ನಾಯಕನಟ ಪೃಥ್ವಿ ಅಂಬರ್ ಮಾತನಾಡಿ ದಿಯಾ ರಿಲೀಸಾದ ನಂತರ ಎಲ್ಲೆಡೆ ಲಾಕ್‌ಡೌನ್ ಆಗಿ ನಾನು ಊರಲ್ಲಿದ್ದೆ, ಆ ಸಂದರ್ಭದಲ್ಲಿ ನಿರ್ಮಾಪಕರು ಕಾಲ್‌ಮಾಡಿ ನಿಮಗೆ ಶುಗರ್ ಇದೆಯಾ ಎಂದು ಕೇಳಿದರು. ಆಗ ನನಗೆ ಗೊತ್ತಾಯ್ತು, ಇವರು ಇದೇ ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡ್ತಿದಾರೆಂದು. ಯಾರೂ ಹೊರಗೇ ಬರದಿದ್ದ ಸಮಯವಾದ್ದರಿಂದ ಫೋನ್‌ನಲ್ಲೇ ಕಥೆ ಕೇಳಿದೆ, ಗುರು ಕಶ್ಯಪ್ ಅದ್ಭುತ ಸಂಭಾಷಣೆಗಳನ್ನು ಬರೆದಿದ್ದಾರೆ.ರೊಮ್ಯಾನ್ಸ್, ಕಾಮಿಡಿ ಎಮೋಷನ್ ಎಲ್ಲವೂ ಈ ಚಿತ್ರದಲ್ಲಿದೆ. ಹೆಸರು ಮಾತ್ರ ಶುಗರ್‌ಲೆಸ್, ಆದರೆ ಚಿತ್ರದ ತುಂಬಾ ಸಿಹಿಯೇ ತುಂಬಿದೆ. ನಿರ್ಮಾಪಕರು ಇಡೀ ಟೀಮನ್ನು ಕ್ಯಾಪ್ಟನ್ ಥರ ಲೀಡ್ ಮಾಡಿದ್ದರು, ಲಾಕ್ಡೌನ್ ಮುಗಿದಕೂಡಲೇ ಪ್ರಾರಂಭಿಸಿದ ಸಿನಿಮಾವಿದು. ಛಾಯಾಗ್ರಾಹಕ ಲವಿತ್ ನಮ್ಮನ್ನೆಲ್ಲ ತುಂಬಾ ಚೆನ್ನಾಗಿ ತೋರಿಸಿದ್ದಾರೆ, ನಾಯಕಿ ಪ್ರಿಯಾಂಕ, ಧರ್ಮಣ್ಣ ಅದ್ಭುತವಾಗಿ ಅಭಿನಯಿಸಿದ್ದಾರೆ ಎಂದು ಹೇಳಿದರು. ನಾಯಕಿ ಬಿಗ್ ಬಾಸ್ ಪ್ರಿಯಂಕಾ, ಪದ್ಮಜಾರಾವ್ ತಮ್ಮ ಪಾತ್ರಗಳ ಕುರಿತಂತೆ ಮಾತನಾಡಿದರು.

ರಿಲೀಸ್‌ಗೂ ಮುನ್ನವೇ ಹಿಂದಿಗೆ ರೀಮೇಕ್ ರೈಟ್ಸ್ :
ಶುಗರ್‌ಲೆಸ್ ಚಿತ್ರದ ಹಿಂದಿ ರೀಮೇಕ್ ಹಕ್ಕುಗಳನ್ನು ಬಾಲಿವುಡ್‌ನ ಹೆಸರಾಂತ ಸಂಸ್ಥೆಯಾದ ಬ್ಲಾಕ್ ಪ್ಯಾಂತರ್ ಮೂವೀಸ್ ಲಿಮಿಟೆಡ್ ಖರೀದಿಸಿದೆ. ಈ ಕುರಿತು ಚಿತ್ರದ ನಿರ್ಮಾಪಕ, ನಿರ್ದೇಶಕ ಶಶಿಧರ್ ಮಾತನಾಡುತ್ತ ನಮ್ಮ ಚಿತ್ರ ಜುಲೈ ೮ರಂದು ಬಿಡುಗಡೆಯಾಗುತ್ತಿದೆ. ಟ್ರೈಲರ್‌ಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಸಿಕ್ಕಾಪಟ್ಟೆ ಲೈಕ್ಸ್ ಕೂಡ ಬರುತ್ತಿದೆ, ವಿಶೇಷವಾಗಿ ಬೇರೆ ಭಾಷೆಯವರೂ ಸಹ ನಮ್ಮ ಟ್ರೈಲರ್ ನೋಡಿ ಮೆಚ್ಚಿ ನನಗೆ ಕಾಲ್ ಮಾಡ್ತಿದಾರೆ. ನಾರ್ತ್ ಇಂಡಿಯಾ ಕಡೆಯಿಂದಲೂ ಕಾಲ್ ಮಾಡಿ ಚಿತ್ರವನ್ನು ನಮ್ಮಲ್ಲೂ ರಿಲೀಸ್ ಮಾಡಿ ಎಂದು ಕೇಳುತ್ತಿದ್ದಾರೆ. ಒಬ್ಬ ಡೆಬ್ಯೂ ಡೈರೆಕ್ಟರ್‌ಗೆ ಇಂಥ ರೆಸ್ಪಾನ್ಸ್ ಸಿಗುತ್ತಿರುವುದು ತುಂಬಾ ಖುಷಿ ತಂದಿದೆ. ಈಗಾಗಲೇ ಹಿಂದಿ ಭಾಷೆಯಲ್ಲಿ ಈ ಚಿತ್ರವನ್ನು ನಾನೇ ನಿರ್ದೇಶನ ಮಾಡಲು ಬ್ಲಾಕ್ ಪ್ಯಾಂತರ್ ಮೂವೀಸ್‌ನೊಂದಿಗೆ ಅಗ್ರಿಮೆಂಟ್ ಕೂಡ ಆಗಿದೆ. ಚಿತ್ರವನ್ನು ಆಗಸ್ಟನಲ್ಲೇ ಪ್ರಾರಂಭಿಸಿ ಎಂದು ಅವರು ಹೇಳಿದ್ದಾರೆ. ಆದರೆ ನಮ್ಮ ವೀರಂ ಚಿತ್ರವನ್ನು ಬಿಡುಗಡೆ ಮಾಡಬೇಕಿರುವುದರಿಂದ ನಾನೇ ಸ್ವಲ್ಪ ಮುಂದೆ ಹೋಗೋಣ ಎಂದು ಕೇಳಿಕೊಂಡಿದ್ದೇನೆ, ಅಲ್ಲದೆ ಚಿತ್ರದ ನಾಯಕನ ಪಾತ್ರಕ್ಕೆ ಒಬ್ಬ ಬಿಗ್‌ಸ್ಟಾರ್ ಜೊತೆಗೆ ಈಗಾಗಲೇ ಅಗ್ರಿಮೆಂಟ್ ಕೂಡ ಆಗಿದ್ದು, ಪ್ರೆಸ್‌ಮೀಟ್ ಮಾಡಿ ಅವರ ಹೆಸರನ್ನು ಪ್ರಕಟಿಸುವುದಾಗಿಯೂ ಹೇಳಿದರು.
ಬ್ಲಾö್ಯಕ್ ಪ್ಯಾಂತರ್ ಸಂಸ್ಥೆಯ ಪರವಾಗಿ ಬಂದಿದ್ದವರಲ್ಲಿ ಅನಿಲ್ ಮಾತನಾಡಿ ಪ್ರತಿಯೊಬ್ಬರೂ ಓಟಿಟಿಯಲ್ಲಿ ಬೇರೆ ಭಾಷೆಯ ಚಿತ್ರಗಳನ್ನು ನೋಡಿ ಚೆನ್ನಾಗಿದೆ ಅಂತ ಮಾತನಾಡಿಕೊಳ್ಳುತ್ತೇವೆ. ಈಗ ನಮ್ಮಲ್ಲೇ ಅಂಥ ಚಿತ್ರಗಳು ಬರುತ್ತಿವೆ. ಸಾಮಾನ್ಯವಾಗಿ ಸಿನಿಮಾ ರಿಲೀಸಾದ ನಂತರ ಆ ಚಿತ್ರದ ರೀಮೇಕ್ ರೈಟ್ಸ್ ತೆಗೆದುಕೊಳ್ಳುತ್ತೇವೆ. ಆದರೆ ಈ ಸಿನಿಮಾ ನೋಡಿ ರಿಲೀಸ್‌ಗೂ ಮುನ್ನವೇ ನಾವು ಖರೀದಿಸಿದ್ದೇವೆ. ಹಿಂದಿಯಲ್ಲೂ ಶಶಿಧರ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಸ್ಟಾರ್ ನಟರೊಬ್ಬರು ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ. ಅಲ್ಲದೆ ಕನ್ನಡದ ಕಲಾವಿದರೂ ಚಿತ್ರದಲ್ಲಿರುತ್ತಾರೆ ಎಂದು ಹೇಳಿದರು. ಉಳಿದಂತೆ ಶಿವ ಆರ್ಯನ್ ಹಾಗೂ ಜಗದೀಶ್ ಕೂಡ ಮಾತನಾಡಿ ಚಿತ್ರದ ಬಗ್ಗೆ ಮೆಚುಗೆ ವ್ಯಕ್ತಪಡಿಸಿದರು.
ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಸಹ
ಶಶಿಧರ್ ಕೆ.ಎಂ. ಅವರೇ ಹೊತ್ತಿದ್ದಾರೆ. ದಿಶಾ ಎಂಟರ್‌ಟೈನ್ಮೆಂಟ್ ಹಾಗೂ ಜಾಜಿ ಪ್ರೊಡಕ್ಷನ್ಸ್ ಸಹಕಾರದೊಂದಿಗೆ ನಿರ್ಮಾಣವಾಗಿರುವ ಈ ಚಿತ್ರದ ಛಾಯಾಗ್ರಾಹಕರಾಗಿ ಲವಿತ್, ಸಂಗೀತ ನಿರ್ದೇಶಕರಾಗಿ ಅನೂಪ್ ಸೀಳಿನ್ ಕೆಲಸ ಮಾಡಿದ್ದಾರೆ. ಸಕ್ಕರೆ ಖಾಯಿಲೆ ಹಿನ್ನೆಲೆಯ ಹ್ಯೂಮರಸ್ ಆದ ನಿರೂಪಣೆ ಇರುವ ಚಿತ್ರ ಇದಾಗಿದ್ದು, ಕಥೆಯಲ್ಲಿ ಹಾಸ್ಯವೇ ಪ್ರದಾನವಾಗಿದ್ದು ಸಮಾಜಕ್ಕೊಂದು ಮೆಸೇಜ್ ಹೇಳಲಾಗಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *