Connect with us

Cinema News

ಬಂದೇ ಬಿಡ್ತು ‘ತೂತು ಮಡಿಕೆ’‌‌ ಮೋಷನ್ ಟೀಸರ್… ಪ್ರತಿಭಾನ್ವಿತ ತಂಡದ ಪ್ರಯತ್ನಕ್ಕೆ ಬೆನ್ನುತಟ್ಟಿದ ಶ್ರೀನಗರ ಕಿಟ್ಟಿ.

Published

on

ಚಂದನವನದ ಅಂಗಳದಲ್ಲಿ ವಿಭಿನ್ನ ಶೀರ್ಷಿಕೆ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾಗಳಲ್ಲಿ ಒಂದು ತೂತು ಮಡಿಕೆ. ಈಗಾಗಲೇ ಶೂಟಿಂಗ್ ಮುಗಿಸಿರುವ ತೂತು ಮಡಿಕೆ ಬಳಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಈಗ ಮೋಷನ್‌ ಟೀಸರ್ ರಿಲೀಸ್ ಮಾಡಿ ಗಮನಸೆಳೆಯುತ್ತಿದೆ.

ಮೋಷನ್ ಟೀಸರ್ ಔಟ್

ಫಸ್ಟ್ ಲುಕ್ ಮೂಲಕ ಗಮನಸೆಳೆದಿರುವ ತೂತು ಮಡಿಕೆ ಸಿನಿಮಾದ ಮೋಷನ್ ಟೀಸರ್ ನ್ನು ನಟ ಶ್ರೀನಗರ ಕಿಟ್ಟಿ‌ ಅನಾವರಣ ಮಾಡಿ ಪ್ರತಿಭಾನ್ವಿತ ಕಲಾವಿದರ ಬೆನ್ನುತಟ್ಟಿದರು. ಬಳಿಕ‌ ಮಾತಾನಾಡಿದ ಕಿಟ್ಟಿ, ಪೋಸ್ಟರ್ ನಲ್ಲಿಯೇ ಪಾಸಿಟಿವ್ ಫೀಲ್ ಇದೆ. ಕೋವಿಡ್ ನಂತ್ರ ಸಿನಿಮಾಗಳನ್ನು ಪ್ರೇಕ್ಷಕ ಚೆನ್ನಾಗಿ ಸ್ವೀಕರಿಸ್ತಿದ್ದಾನೆ. ಇಡೀ ಕೀರ್ತಿ ಟೀಂಗೆ ಒಳ್ಳೆದಾಗಲಿ ಎಂದರು. ಮೋಷನ್ ಟೀಸರ್ ಸಖತ್ ಇಂಪ್ರೆಸಿವ್ ಆಗಿ‌ ಮೂಡಿಬಂದಿದ್ದು, ಕೀರ್ತಿ ವಿಶೇಷವಾಗಿ‌ ಮೋಷನ್ ಪೋಸ್ಟರ್ ನ್ನು ಪ್ರಸೆಂಟ್ ಮಾಡಿದ್ದಾರೆ.

ತೂತು ಮಡಿಕೆ ಸಿನಿಮಾಗೆ ಚಂದ್ರಕೀರ್ತಿ ಎಂ ಕಥೆ, ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ. ಕಾಮಿಡಿ ಕಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ, ನಾಯಕಿಯಾಗಿ ಪವನಾ ಗೌಡ, ಉಗ್ರಂ ಮಂಜು, ಶಂಕರ್ ಅಶ್ವತ್ಥ್​​​​​, ಗಿರೀಶ್​​ ಶಿವಣ್ಣ, ನಂದಗೋಪಾಲ್, ಅರುಣ್ ಮೂರ್ತಿ, ಸಿತಾರಾ, ರಾಘವೇಂದ್ರ. ಎನ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ಚಿತ್ರದ ಮೂರು ಹಾಡುಗಳಿಗೆ ಸ್ವಾಮಿನಾಥನ್ ಆರ್.ಕೆ. ಸಂಗೀತ ನೀಡಿದ್ದಾರೆ. ಚಂದ್ರಕೀರ್ತಿ, ಎಎಸ್ ಜಿ, ಡಾಲರ್ ಚಿತ್ರಕಥೆ ಬೆಲ್​​​​​​ಬಾಟಂ’ ಖ್ಯಾತಿಯ ರಘು ನಿಡುವಳ್ಳಿಯವರು ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, ಸ್ಪ್ರೆಡಾನ್ ಸ್ಟುಡಿಯೋ ಸಹಯೋಗದೊಂದಿಗೆ
ಸರ್ವತ ಸಿನಿ ಗ್ಯಾರೇಜ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಮಧುಸೂದನ್ ಮತ್ತು ಗಿರಿಬಸವ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತೂತು ಮಡಿಕೆ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಟ ಕಂ‌ ನಿರ್ದೇಶಕ ರಕ್ಷಿತ್ ಶೆಟ್ಟಿ ಕೂಡ ತೂತು ಮಡಿಕೆ ಬಳಗ ಕೆಲಸಕ್ಕೆ ಬೆನ್ನುತಟ್ಟಿದ್ದರು.

Spread the love

Continue Reading
Click to comment

Leave a Reply

Your email address will not be published. Required fields are marked *