Cinema News
ತಮ್ಮೊಂದಿಗೆ ನಾಯಿಗೂ ವಿಮಾನ ಟಿಕೆಟ್ ಬುಕ್ ಮಾಡಲು ಹೇಳುತ್ತಾರಂತೆ ನ್ಯಾಷನಲ್ ಕ್ರಶ್

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಿತ್ಯ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗ್ತಾನೆ ಇರ್ತಾರೆ. ಸದ್ಯ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ರಿಲೀಸ್ ಆದ ಬಳಿಕ ರಶ್ಮಿಕಾ ನಾಯಿ ಕಾರಣದಿಂದ ಆಗಾಗ ಸುದ್ದಿಯಾಗ್ತಿದ್ದಾರೆ.
ಮೊನ್ನೆಯಷ್ಟೇ ರಶ್ಮಿಕಾ ಮಂದಣ್ಣ ತಮ್ಮ ಮುದ್ದಿನ ನಾಯಿಯನ್ನು ಮುದ್ದಿಸುತ್ತಿರು ಫೋಟೋ ಸಖತ್ ವೈರಲ್ ಆಗಿತ್ತು. ಚಾರ್ಲಿ ಸಿನಿಮಾವನ್ನು ಕದ್ದುಮುಚ್ಚಿ ನೋಡಿರುವ ರಶ್ಮಿಕಾ, ತನ್ನ ನಾಯಿ ಜೊತೆ ಭಾವನಾತ್ಮಕವಾಗಿ ಕ್ಷಣಗಳನ್ನು ಕಳೆಯುತ್ತಿದ್ದಾರೆ ಎಂದು ಟ್ರೋಲ್ ಆಗಿತ್ತು. ಇದೀಗ ಅದೇ ನಾಯಿಯ ವಿಚಾರಕ್ಕಾಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಸದ್ಯ ರಶ್ಮಿಕಾ ಮಂದಣ್ಣ ಹಲವು ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಮನೆಗೆ ಹೋಗುವುದೇ ಅಪರೂಪ ಎನ್ನುವಂತಾಗಿದೆಯಂತೆ. ಅದರಲ್ಲೂ ತಮ್ಮ ಪ್ರೀತಿಯ ನಾಯಿಯನ್ನು ಬಿಟ್ಟು ಇರಲು ಅವರಿಂದ ಸಾಧ್ಯವಾಗುತ್ತಿಲ್ಲವಂತೆ. ಇದೇ ಕಾರಣಕ್ಕೆ ತಮ್ಮೊಂದಿಗೆ, ನಾಯಿಗೂ ಫ್ಲೈಟ್ ಟಿಕೆಟ್ ಮಾಡಿಸುವಂತೆ ನಿರ್ಮಾಪಕರಿಗೆ ದುಂಬಾಲು ಬೀಳುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಈ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದು, “ಈ ವಿಷಯ ನನಗೆ ಫನ್ನಿ ಅನಿಸುತ್ತಿದೆ. ಈ ದಿನವನ್ನು ಉಲ್ಲಾಸಗೊಳಿಸಿದೆ. ಸುದ್ದಿ ಕೇಳಿ ನಾನೂ ನಕ್ಕೆ. ನನ್ನ ನಾಯಿಯು ನನ್ನೊಂದಿಗೆ ಬರಲು ಇಚ್ಚೆ ಪಡುವುದಿಲ್ಲ. ಅದು ಹೈದರಾಬಾದ್ ಮನೆಯಲ್ಲೇ ಇರಲು ಇಷ್ಟ ಪಡುತ್ತಿದೆ. ಉಳಿದಂತೆ ಏನೂ ಹೇಳಲಾರೆ. ಒಳ್ಳೆಯದಾಗಲಿ’ ಎಂದು ಟ್ವಿಟ್ ಮಾಡಿದ್ದಾರೆ.
