Cinema News
ರಂಗನಾಯಕಿಗೆ ಜೈ ಎಂದ ವೀಕ್ಷಕ
ದಯಾಳ್ ಪದ್ಮನಾಭನ್ ರಂಗನಾಯಕಿ ಎಂಬ ಮತ್ತೊಂದು ಪ್ರಯೋಗಾತ್ಮಕ ಚಿತ್ರದೊಂದಿಗೆ ಬಂದಿದ್ದು, ಅದರ ಟ್ರೇಲರ್ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಆದಿತಿ ಪ್ರಭುದೇವ , ಬೀರಬಲ್ ಶ್ರೀನಿ, ತ್ರಿವಿಕ್ರಮ್ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾ ಸದ್ಯದಲ್ಲೇ ರಿಲೀಸ್ ಆಗಲಿದೆ.
ಮಹಿಳಾ ದೌರ್ಜನ್ಯದ ಕುರಿತ ಚಿತ್ರದ ಟ್ರೇಲರ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ನಾಯಕಿ ಆದಿತಿ ಪ್ರಭುದೇವ ಅವರು ಇಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಪಾತ್ರ ನಿರ್ವಹಿಸಿದ್ದಾರೆ. ಅದಕ್ಕಾಗಿ ಅವರು ಹಲವು ಪುಸ್ತಕಗಳನ್ನು ಓದಿ ಆಮೇಲೆ ಪಾತ್ರಕ್ಕಾಗಿ ತಯಾರಾಗಿದ್ದಾರಂತೆ. ಈ ಸಿನಿಮಾಗೆ ದೆಹಲಿಯಲ್ಲಿ ನಡೆದ ನಿರ್ಭಯ ಕೇಸ್ ಕೂಡ ಪ್ರೇರಣೆಯಂತೆ.
ಈಗ ಬಿಡುಗಡೆಯಾಗಿರುವ ಟ್ರೇಲರ್‌ನ್ನು ಮೂರು ಲಕ್ಷಕ್ಕೂ ಅಧಿಕ ಮಂದಿ ನೋಡಿದ್ದಾರೆ.