Cinema News
ಯತಿರಾಜ್ ನಿರ್ದೇಶನದ ಮೂರನೇ ಚಿತ್ರ: ಮಾಯಾಮೃಗ

ಪೂರ್ಣಸತ್ಯ ಹಾಗೂ ಸೀತಮ್ಮನ ಮಗ ಚಿತ್ರಗಳ ನಂತರ ನಟ,ನಿರ್ದೇಶಕ ಯತಿರಾಜ್ ತಮ್ಮ ನಿರ್ದೇಶನದ ಮೂರನೇ ಚಿತ್ರ ಘೋಷಿಸಿದ್ದಾರೆ.
ಚಿತ್ರದುರ್ಗದ ಜಯಲಕ್ಷ್ಮಿ ರಘು ಅವರ ನಿರ್ಮಾಣದ ನೂತನ ಚಿತ್ರಕ್ಕೆ ‘ಮಾಯಾಮೃಗ’ ಎಂಬ ಶೀರ್ಷಿಕೆ ಇಟ್ಟಿದ್ದಾರೆ.
‘ಟಿ ಎನ್ ಸೀತಾರಾಂ ಅವರ ಜನಪ್ರಿಯ ಧಾರಾವಾಹಿ ಮಾಯಾಮೃಗ ದ ಹೆಸರೇ ನನ್ನ ಕಥೆಗೂ ಸೂಕ್ತ ಎನಿಸಿದ ಕಾರಣ ಅದನ್ನೇ ಅಂತಿಮಗೊಳಿಸಲಾಯಿತು’ಎಂದು ವಿವರಣೆ ನೀಡುವ ಯತಿರಾಜ್, ಉಳಿದ ವಿವರಗಳನ್ನು ನೀಡಲು ಸ್ವಲ್ಪ ಸಮಯ ಬೇಕು ಎನ್ನುತ್ತಾರೆ.

ಸದ್ಯ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ. ಅದಕ್ಕಾಗಿ ಇದೇ ತಿಂಗಳ 13 ರ ಭಾನುವಾರದಂದು ಚಿತ್ರದುರ್ಗದ ವಾಸವಿ ಶಾಲೆಯಲ್ಲಿ ಆಡಿಷನ್ ಕರೆಯಲಾಗಿದೆ. ನಿರ್ಮಾಪಕರು ದುರ್ಗದವರೇ ಆಗಿರುವುದರಿಂದ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬುದು ಅವರ ಆಶಯ ಎನ್ನುತ್ತಾರೆ ಯತಿರಾಜ್ .
ಅಪರೂಪದ ಕಥಾವಸ್ತು ಹೊಂದಿರುವ ಮಾಯಾಮೃಗದಲ್ಲಿ ಯತಿರಾಜ್ ಅವರೇ ನಾಯಕನಾಗಿ ಬಣ್ಣ ಹಚ್ಚುತ್ತಿದ್ದು, ಉಳಿದ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಪಟ್ಟಿ ಶೀಘ್ರದಲ್ಲೇ ಹೊರ ಬೀಳಲಿದೆಯಂತೆ.
